ಮುಂಬೈ:ಎಂಟು ವರ್ಷದ ಬಾಲಕಿಗೆ ಟ್ಯೂಶನ್ ಟೀಚರ್ವೊಬ್ಬರು ಕಠಿಣ ಶಿಕ್ಷೆ ನೀಡಿರುವ ಘಟನೆ ಮುಂಬೈನ ಠಾಣೆಯಲ್ಲಿ ನಡೆದಿದೆ.
450 ಬಸ್ಕಿ ಹೊಡೆದ 8 ವರ್ಷದ ವಿದ್ಯಾರ್ಥಿನಿ... ಶಿಕ್ಷಕಿಯ ಕಠಿಣ ಶಿಕ್ಷೆಗೆ ನರಳಿದ ಬಾಲಕಿ! - Class 3 Girl punished with 450 sit ups,
ಶಿಕ್ಷಕಿಯೊಬ್ಬರು ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ 450 ಬಸ್ಕಿ ತೆಗೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಹೋಂ ವರ್ಕ್ ಮಾಡಿಲ್ಲ ಎಂದು ಟ್ಯೂಷನ್ ಟೀಚರ್ ಲತಾ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ 450 ಬಸ್ಕಿ ತೆಗೆಸಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಕಾಲುಗಳು ಬಾವು ಬಂದಿದ್ದು, ನಡೆಯದ ಸ್ಥಿತಿ ಎದುರಾಗಿತ್ತು. ಬಳಿಕ ತನ್ನ ಸ್ನೇಹಿತರ ಸಹಾಯದೊಂದಿಗೆ ಬಾಲಕಿ ಕಾಲುಗಳ ನೋವಿನಲ್ಲೇ ಮನೆ ಸೇರಿದ್ದಳು. ಇನ್ನು ಈ ವಿಷಯ ಬಾಲಕಿಯ ಪೋಷಕರಿಗೆ ತಿಳಿದಿದ್ದು, ಕೂಡಲೇ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಶಿಕ್ಷಕಿ ಮೇಲೆ ದೂರು ನೀಡಿದರು.
ಶಿಕ್ಷಕಿ ಲತಾ ಈ ಹಿಂದೆ ಬಾಲಕಿಯನ್ನು ವಿವಸ್ತ್ರಗೊಳಿಸಿ ಕಟ್ಟಿಗೆಯಿಂದ ಥಳಿಸಿದ್ದಾರೆ ಎಂದು ದೂರು ನೀಡಿರುವ ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
TAGGED:
Class 3 Girl punished,