ನವದೆಹಲಿ:ಪ್ರಸಕ್ತ ಸಾಲಿನ 12ನೇ ತರಗತಿಯ ಪೂರಕ ಪರೀಕ್ಷೆಗಳ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಅಕ್ಟೋಬರ್ 10ರಂದು ಪ್ರಕಟಿಸಲಾಗುವುದು ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ) ಮಾಹಿತಿ ನೀಡಿದೆ.
ಅ.10ಕ್ಕೆ 12ನೇ ತರಗತಿ ಸಿಬಿಎಸ್ಇ ಪೂರಕ ಪರೀಕ್ಷೆಗಳ ಫಲಿತಾಂಶ: ಸುಪ್ರೀಂಗೆ ಮಾಹಿತಿ ನೀಡಿದ ಇಲಾಖೆ - ಸುಪ್ರೀಂಕೋರ್ಟ್ ಸಿಬಿಎಸ್ಇ
12ನೇ ತರಗತಿ ಸಿಬಿಎಸ್ಇ ಪರೀಕ್ಷಾ ಫಲಿತಾಂಶ ಅಕ್ಟೋಬರ್ 10ರಂದು ಪ್ರಕಟಿಸಲಾಗುವುದು ಎಂದು ಸುಪ್ರೀಂಕೋರ್ಟ್ಗೆ ಸಿಬಿಎಸ್ಇ ಮಾಹಿತಿ ನೀಡಿದೆ.
![ಅ.10ಕ್ಕೆ 12ನೇ ತರಗತಿ ಸಿಬಿಎಸ್ಇ ಪೂರಕ ಪರೀಕ್ಷೆಗಳ ಫಲಿತಾಂಶ: ಸುಪ್ರೀಂಗೆ ಮಾಹಿತಿ ನೀಡಿದ ಇಲಾಖೆ CBSE](https://etvbharatimages.akamaized.net/etvbharat/prod-images/768-512-8922181-thumbnail-3x2-wdfdfd.jpg)
CBSE
12ನೇ ತರಗತಿ ಪೂರಕ ಪರೀಕ್ಷೆಗಳ ಫಲಿತಾಂಶವನ್ನು ಆದಷ್ಟು ಬೇಗ ಪ್ರಕಟಗೊಳಿಸುವಂತೆ ಸುಪ್ರೀಂಕೋರ್ಟ್ ಸಿಬಿಎಸ್ಇಗೆ ಸೂಚನೆ ನೀಡಿದ್ದರ ಬೆನ್ನಲ್ಲೇ ಇದೀಗ ಈ ಮಾಹಿತಿ ನೀಡಿದೆ.
ಅಕ್ಟೋಬರ್ 31ರೊಳಗೆ ಯುಜಿಸಿಯ ಪ್ರಸಕ್ತ ಸಾಲಿನ ಪ್ರವೇಶಾತಿ ಮುಕ್ತಾಯಗೊಳ್ಳಲಿರುವ ಕಾರಣ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಸಮಯವಕಾಶ ನೀಡಿ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಸೆಪ್ಟೆಂಬರ್ 22ರಿಂದ ಪೂರಕ ಪರೀಕ್ಷೆಗಳು ಆರಂಭಗೊಂಡಿದ್ದು, ಸೆ. 29ರವರೆಗೆ ನಡೆಯಲಿವೆ. ಎರಡು ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ.