ಕೋಲ್ಕತ್ತಾ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಕೋಲ್ಕತ್ತಾ ವಿವಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಅಮಿತ್ ಶಾ ರೋಡ್ ಶೋ ವಿರೋಧಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬಿಜೆಪಿ ಕಾರ್ಯಕರ್ತರೊಂದಿಗೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು, ಗಲಭೆ ತಾರರಕ್ಕೇರಿದೆ. ವಿವಿ ಗೇಟ್ಗೆ ಬಿಜೆಪಿಗರು ಬಾಟಲ್ ಹಾಗೂ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ. ಮತ್ತೊಂದು ಗುಂಪು ಅಮಿತ್ ಶಾರಿದ್ದ ಟ್ರಕ್ಗೂ ದೊಣ್ಣೆಗಳನ್ನು ಎಸೆಯಿತು ಎಂದು ವರದಿಯಾಗಿದೆ.