ಪಾಲ್ಫರ್ (ಮಹಾರಾಷ್ಟ್ರ): ಹಥ್ರಾಸ್ ಘಟನೆಯನ್ನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಜಟಾಪಟಿ ನಡೆದಿರುವ ಘಟನೆ ಪಾಲ್ಫರ್ನ ವಾಸೈನಲ್ಲಿ ನಡೆದಿದೆ.
ಹಥ್ರಾಸ್ ಪ್ರಕರಣ: ಪ್ರತಿಭಟನೆ ವೇಳೆ ‘ಕೈ ಕೈ’ ಮಿಲಾಯಿಸಿದ ಕಾರ್ಯಕರ್ತರು - clashes between Congress workers
ಹಥ್ರಾಸ್ ಘಟನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರೇ ಕೈ ಕೈ ಮಿಲಾಯಿಸಿರುವ ಘಟನೆ ಪಾಲ್ಫರ್ನಲ್ಲಿ ನಡೆದಿದೆ.
‘ಕೈ’ ಮಿಲಾಯಿಸಿದ ಕಾರ್ಯಕರ್ತರು
ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ವೇಳೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು, ತಾ ಮುಂದು ನಾ ಮುಂದು ಎಂದು ಮಾತಾಡೋಕೆ ಶುರು ಮಾಡಿದ್ದಾರೆ. ಈ ವೇಳೆ ಪ್ರತಿಷ್ಠೆಯ ಜಿದ್ದಿಗೆ ಬಿದ್ದ ನಾಯಕರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪ್ರತಿಭಟನೆಯಲ್ಲಿ ಹಿಡಿಯಲು ತಂದಿದ್ದ ಬ್ಯಾನರ್ಗಳನ್ನೇ ಹರಿದು ರಂಪಾಟ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ವಾಘ್ಮೋರೆ ಮತ್ತು ಕಾರ್ಯದರ್ಶಿ ಮಣಿಯಾರ್ ನಡುವೆ ಈ ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ಗಲಾಟೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಕರ ಈ ನಡೆಗೆ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.