ಕರ್ನಾಟಕ

karnataka

ETV Bharat / bharat

ಕೊರೊನಾ ಎಫೆಕ್ಟ್​: ಡಮ್ ಡಮ್ ಜೈಲಿನಲ್ಲಿ ಡಿಶುಂ ಡಿಶುಂ... ಮೂವರು ಕೈದಿಗಳು ಸಾವು - Dum Dum Central Jail

ಕೋಲ್ಕತ್ತಾದ ಡಮ್ ಡಮ್ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಹಾಗೂ ಪೊಲೀಸ್​ ಅಧಿಕಾರಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಕೈದಿಗಳು ಮೃತಪಟ್ಟಿದ್ದಾರೆ.

Dum Dum Central Jail
ಡಮ್ ಡಮ್ ಜೈಲಿನಲ್ಲಿ ಡಿಶುಂ ಡಿಶುಂ

By

Published : Mar 21, 2020, 5:39 PM IST

ಕೋಲ್ಕತ್ತಾ: ಕೈದಿಗಳು ಹಾಗೂ ಪೊಲೀಸ್​ ಅಧಿಕಾರಿಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಕೈದಿಗಳು ಮೃತಪಟ್ಟಿರುವ ಘಟನೆ ಕೋಲ್ಕತ್ತಾದ ಡಮ್ ಡಮ್ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.

ಕೋಲ್ಕತ್ತಾದ ಡಮ್ ಡಮ್ ಸೆಂಟ್ರಲ್ ಜೈಲಿನಲ್ಲಿ ಘರ್ಷಣೆ

ಕೊರೊನಾ ಭೀತಿ ಹಿನ್ನೆಲೆ ಕೈದಿಗಳನ್ನು ಭೇಟಿ ಮಾಡದಂತೆ ಸಂಬಂಧಿಕರಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಆಕ್ರೋಶಗೊಂಡಿರುವ ಕೈದಿಗಳು ಜೈಲು ಆವರಣವನ್ನು ಧ್ವಂಸ ಮಾಡಿ, ಜೈಲಿನ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಅಲ್ಲದೇ ಜೈಲು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಿಂಸಾಚಾರಕ್ಕೆ ತಿರುಗಿದ ಗಲಾಟೆಯಲ್ಲಿ ಮೂವರು ಕೈದಿಗಳು ಮೃತಪಟ್ಟರೆ, ಇನ್ನೂ ಮೂವರು ಗಾಯಗೊಂಡಿದ್ದಾರೆ.

ಮೃತ ಕೈದಿಗಳಿಬ್ಬರನ್ನು ಕಮಲೇಶ್​ ಹಾಗೂ ಕಾನಾ ಪಪ್ಪು ಎಂದು ಗುರುತಿಸಲಾಗಿದ್ದು, ಇನ್ನೋರ್ವ ಮೃತನ ಹೆಸರು ತಿಳಿದುಬಂದಿಲ್ಲ.

ABOUT THE AUTHOR

...view details