ರಾಂಚಿ :ಯಾರಾದ್ರೂ ಪ್ರತಿಭಟನೆ ನಡೆಸಿ ನೂಕುನುಗ್ಗಲು ಮಾಡಲು ಯತ್ನಿಸಿದ್ರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ತಡೆಯೋದನ್ನು ನೋಡಿರುತ್ತೇವೆ. ಆದರೆ, ರಾಂಚಿಯಲ್ಲಿ ಪೊಲೀಸರೇ ಲಾಠಿ ಹಿಡಿದು ಮುಷ್ಕರ ನಿರತ ಪೊಲೀಸರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.
ರಾಂಚಿಯಲ್ಲಿ ಖಾಕಿ ದೊಣ್ಣೆ ವರಸೆ.. ಪೊಲೀಸರಿಂದ್ಲೇ ಪೊಲೀಸರ ಮೇಲೆ ಲಾಠಿಚಾರ್ಜ್- ವಿಡಿಯೋ - ಜಾರ್ಖಂಡ್ ಪೊಲೀಸರು
ತಮ್ಮ ಹುದ್ದೆಯನ್ನ ಖಾಯಂಗೊಳಿಸುವಂತೆ ಒತ್ತಾಯಿಸಿ ರಾಂಚಿಯಲ್ಲಿ ಸಹಾಯಕ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರು. ಬ್ಯಾರಿಕೇಡ್ ದಾಟಿ ನುಗ್ಗಲು ಯತ್ನಿಸಿದ್ದ ಪ್ರತಿಭಟನಾನಿರತ ಸಹಾಯಕ ಪೊಲೀಸರು ಹಾಗೂ ರಾಜ್ಯ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ..
ಪೊಲೀಸರ ಘರ್ಷಣೆ
ಜಾರ್ಖಂಡ್ನ ರಾಂಚಿಯಲ್ಲಿ ರಾಜ್ಯ ಪೊಲೀಸರ ಹಾಗೂ ಸಹಾಯಕ ಪೊಲೀಸ್ ಸಿಬ್ಬಂದಿ ನಡುವೆ ಈ ಘಟನೆ ನಡೆದಿದೆ. ತಮ್ಮ ಹುದ್ದೆಗಳನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ರಾಂಚಿಯಲ್ಲಿ ಸಹಾಯಕ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಬ್ಯಾರಿಕೇಡ್ ದಾಟಿ ನುಗ್ಗಲು ಯತ್ನಿಸಿದ್ದ ಪ್ರತಿಭಟನಾನಿರತ ಸಹಾಯಕ ಪೊಲೀಸರು ಹಾಗೂ ರಾಜ್ಯ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ವೇಳೆ ಮುಷ್ಕರ ನಿರತರ ಮೇಲೆ ರಾಜ್ಯ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅಶ್ರವಾಯು ಬಳಸಿ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾಗಿದ್ದಾರೆ.