ಕರ್ನಾಟಕ

karnataka

ETV Bharat / bharat

ಮೈಮೇಲೆ ದೇವರು ಬಂದಂತೆ ವರ್ತಿಸಿ ಮಗನನ್ನೇ ಕೊಲೆ ಮಾಡಿದ ಪಾಪಿ ತಾಯಿ - Madhya Pradesh's Panna district

ಪನ್ನಾ ಜಿಲ್ಲೆಯ ಕೊಹ್ನಿ ಗ್ರಾಮದ ಮಹಿಳೆಯೊಬ್ಬರು ಮೈಮೇಲೆ ದೇವರು ಬಂದಿದೆ ಎಂದು ಭಾವಿಸಿ, ತನ್ನ ಮಗನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.

Arrest
Arrest

By

Published : Oct 22, 2020, 5:19 PM IST

ಮಧ್ಯಪ್ರದೇಶ: ಮಹಿಳೆಯೊಬ್ಬರು ತನ್ನ 24 ವರ್ಷದ ಮಗನನ್ನು ಕೊಲೆ ಮಾಡಿದ ಘಟನೆ ಪನ್ನಾ ಜಿಲ್ಲೆಯ ಕೊಹ್ನಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ 4.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುನಿಯಾಬಾಯಿ ಲೋಧಿ (50) ತನ್ನ ಮಗ ದ್ವಾರಕಾ (24) ನನ್ನು ಕೊಡಲಿಯಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾರೆ ಎಂದು ಪನ್ನಾ ಕೊಟ್ವಾಲಿ ಪೊಲೀಸ್ ಠಾಣೆ ಸಿಬ್ಬಂದಿ ಅರುಣ್ ಸೋನಿ ತಿಳಿಸಿದ್ದಾರೆ.

ಸುನಿಯಾಬಾಯಿ ಲೋಧಿ ಕೆಲವೊಮ್ಮೆ ಮೈಮೇಲೆ ದೇವರು ಬಂದಂತೆ ವರ್ತಿಸುತ್ತಿದ್ದಳು. ಬುಧವಾರ ರಾತ್ರಿ ಸಹ ನನ್ನ ಮೈಮೇಲೆ ದೇವರು ಬಂದಂತೆ ಭಾಸವಾಯಿತು. ಈ ವೇಳೆ ನನ್ನ ಮಗನಿಗೆ ಕೊಡಲಿಯಿಂದ ಹಲ್ಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಕುರಿತು ಪೊಲೀಸರು ಮಹಿಳೆಯನ್ನು ಬಂಧಿಸಿ, ಕೊಡಲಿಯನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details