ಕರ್ನಾಟಕ

karnataka

ETV Bharat / bharat

ಕೌನ್​ ಬನೇಗಾ ಸುಪ್ರೀಂ ಸಿಜೆಐ..? ಗೊಗೊಯಿ ಶಿಫಾರಸು ಇವರೇ..

ದೀಪಕ್ ಮಿಶ್ರಾ ನಂತರದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರಂಜನ್ ಗೊಗೊಯಿ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಇದೇ ವೇಳೆ ಗೊಗೊಯಿ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.

ಸುಪ್ರೀಂ ಕೋರ್ಟ್​

By

Published : Oct 18, 2019, 11:39 AM IST

ನವದೆಹಲಿ: ಇಡೀ ಭಾರತ ದೇಶವೇ ಸದ್ಯ ಅಯೋಧ್ಯೆ ಭೂವಿವಾದಿದ ಕುರಿತಂತೆ ಸುಪ್ರೀಂಕೋರ್ಟ್​ ನೀಡುವ ಐತಿಹಾಸಿಕ ತೀರ್ಪಿನ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಇದೇ ತೀರ್ಪನ್ನು ಓದಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ನಿವೃತ್ತರಾಗಲಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ

ದೀಪಕ್ ಮಿಶ್ರಾ ನಂತರದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರಂಜನ್ ಗೊಗೊಯಿ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಇದೇ ವೇಳೆ ಗೊಗೊಯಿ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿನ ಎರಡನೇ ಹಿರಿಯ ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ಹೆಸರನ್ನು ನಿರ್ದೇಶನ ಮಾಡಿದ್ದಾರೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಧಿಕಾರ ಮುಕ್ತಾಯದ ವೇಳೆ ತಮ್ಮ ಉತ್ತರಾಧಿಯ ಹೆಸರನ್ನು ಶಿಫಾರಸು ಮಾಡುವ ಸಂಪ್ರದಾಯ ರೂಢಿಯಲ್ಲಿದೆ.

ABOUT THE AUTHOR

...view details