ಕರ್ನಾಟಕ

karnataka

ETV Bharat / bharat

ನಿವೃತ್ತಿಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ ಸಿಜೆಐ ರಂಜನ್​ ಗೊಗೊಯ್​ - ಸಿಜೆಐ ರಂಜನ್​ ಗೊಗೊಯ್ ತಿರುಪತಿಗೆ ಭೇಟಿ

ನ್ಯಾಯಮೂರ್ತಿ ಗೊಗೊಯ್ ಅವರು ತಮ್ಮ ಪತ್ನಿಯೊಂದಿಗೆ ಶನಿವಾರ ಸಂಜೆ ಆಗಮಿಸಿ ತಿರುಮಲದ ದೇವಸ್ತಾನಂ ಅತಿಥಿ ಗೃಹದಲ್ಲಿ ಕೆಲಹೊತ್ತು ತಂಗಿದರು. ನಂತರ ದೇವಾಲಯದ ಸಮೀಪವಿರುವ ಮಂಟಪದಲ್ಲಿ ವೆಂಕಟೇಶ್ವರರ ಮೂರ್ತಿಯ ಸಹಸ್ರನಾಮದ ದೀಪಲಂಕಾರ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಬಳಿಕ ಬಾಲಾಜಿಯ ದರ್ಶನ ಪಡೆದರು.

ಸಿಜೆಐ ರಂಜನ್​ ಗೊಗೊಯ್​

By

Published : Nov 17, 2019, 5:34 AM IST

ತಿರುಪತಿ: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ಅಧಿಕಾರ ಅವಧಿ ಅಂತ್ಯವಾಗುವ ಒಂದು ದಿನ ಮೊದಲು (ನವೆಂಬರ್ 17ಕ್ಕೆ ಅಂತ್ಯವಾಗಲಿದೆ) ತಿರುಪತಿಯ ವೆಂಕಟೇಶ್ವರ ಸನ್ನಿಧಾನಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಗೊಗೊಯ್ ಅವರು ತಮ್ಮ ಪತ್ನಿಯೊಂದಿಗೆ ಶನಿವಾರ ಸಂಜೆ ಆಗಮಿಸಿ ತಿರುಮಲದ ದೇವಸ್ತಾನಂ ಅತಿಥಿ ಗೃಹದಲ್ಲಿ ಕೆಲಹೊತ್ತು ತಂಗಿದರು. ನಂತರ ದೇವಾಲಯದ ಸಮೀಪವಿರುವ ಮಂಟಪದಲ್ಲಿ ವೆಂಕಟೇಶ್ವರರ ಮೂರ್ತಿಯ ಸಹಸ್ರನಾಮದ ದೀಪಲಂಕಾರ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಬಳಿಕ ಬಾಲಾಜಿಯ ದರ್ಶನ ಪಡೆದರು ಎಂದು ಟಿಟಿಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಿರುಪತಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ ಸಿಜೆಐ ರಂಜನ್​ ಗೊಗೊಯ್​

ತಿರುಮಲ ಬೆಟ್ಟ ತಲುಪುವ ಮುನ್ನ ತಿರುಚನೂರಿನಲ್ಲಿರುವ ಪದ್ಮಾವತಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಭಾನುವಾರ ಬೆಳಿಗ್ಗೆ ಮತ್ತೆ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ABOUT THE AUTHOR

...view details