ಕರ್ನಾಟಕ

karnataka

ETV Bharat / bharat

ಕೇಂದ್ರದ ಎನ್​ಆರ್​ಸಿ ಯೋಜನೆ ಬೆಂಬಲಿಸಿದ ಸಿಜೆಐ ರಂಜನ್​​​ ಗೊಗೋಯ್​​​ - ಕೇಂದ್ರ ಎನ್​ಆರ್​ಸಿ ಯೋಜನೆ ಬೆಂಬಲಿಸಿದ ಸಿಜೆಐ ರಂಜನ್​ ಗೊಗೋಯ್

ಎನ್​ಆರ್​ಸಿ ಭವಿಷ್ಯದಲ್ಲಿ ಮೂಲ ದಾಖಲೆಯಾಗಲಿದೆ ಎಂದು ಹೇಳುವ ಮೂಲಕ ಸಿಜೆಐ ರಂಜನ್​ ಗೊಗೋಯ್​ ಕೇಂದ್ರದ ಎನ್​ಆರ್​ಸಿ ಯೋಜನೆಯನ್ನು ಬೆಂಬಲಿಸಿದ್ದಾರೆ.

ಸಿಜೆಐ ರಂಜನ್​ ಗೊಗೋಯ್​

By

Published : Nov 4, 2019, 10:55 AM IST

ನವದೆಹಲಿ: ಸಾಕಷ್ಟು ಟೀಕೆ, ವಿವಾದಗಳಿಗೆ ಗ್ರಾಸವಾಗಿರುವ ರಾಷ್ಟ್ರೀಯ ಪೌರತ್ವ ನೊಂದಣಿ (ಎನ್​ಆರ್​ಸಿ) ಯೋಜನೆಯನ್ನು ಸಿಜೆಐ ರಂಜನ್ ಗೊಗೋಯ್​ ಸಮರ್ಥಿಸಿದ್ದಾರೆ. ಅಸ್ಸೋಂನಲ್ಲಿ ಜಾರಿಯಾಗಿರುವ ಎನ್​ಆರ್​ಸಿ ಭವಿಷ್ಯದಲ್ಲಿ ಒಂದು ಮೂಲ ದಾಖಲೆಯಾಗಲಿದೆ. ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸಮಸ್ಯೆಗೆ ಎನ್​ಆರ್​ಸಿ ಪರಿಹಾರ ಒದಗಿಸುತ್ತದೆ ಎಂದು ಹೇಳಿದ್ದಾರೆ.

ವರ್ತಮಾನದಲ್ಲಿ ಎನ್​ಆರ್​ಸಿ ಉಪಯುಕ್ತವೆನಿಸದೆ ಇರಬಹುದು. ಪೌರತ್ವ ಪಟ್ಟಿಯಿಂದ 19 ಲಕ್ಷ ಅಥವಾ 40 ಲಕ್ಷ ಜನ ಹೊರಗಿದ್ದಾರೆ ಎಂಬುದು ಮುಖ್ಯವಲ್ಲ. ಆದರೆ, ಎನ್​ಆರ್​ಸಿ ಭವಿಷ್ಯಕ್ಕಾಗಿ ಒಂದು ಮೂಲ ದಾಖಲೆಯಾಗಿ ಉಳಿಯಲಿದೆ ಎಂಬುದು ಮಾತ್ರ ಸತ್ಯ. ಭವಿಷ್ಯದ ಉಲ್ಲೇಖಕ್ಕೆ ಈ ದಾಖಲೆಯನ್ನು ಉಪಯೋಗಿಸಬಹುದು. ಎನ್​ಆರ್​ಸಿಯ ಮೂಲ ಆಶಯ ಶಾಂತಿ, ಸಹಬಾಳ್ವೆ ಎಂದು ರಂಜನ್ ಗೊಗೋಯ್ ಹೇಳಿದ್ದಾರೆ.

‘ಪೋಸ್ಟ್ ಕೊಲೋನಿಯಲ್ ಅಸ್ಸಾಂ’ ಎಂಬ ಪುಸ್ತಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್​​, ಎನ್​ಆರ್​ಸಿ ವಿಚಾರದ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎನ್​ಆರ್​ಸಿ ಕುರಿತು ಕಟು ವಿಮರ್ಶೆ ನಡೆಸುತ್ತಿದ್ದಾರೆ. ಎನ್​ಆರ್​ಸಿ ಯೋಜನೆ ಬಗ್ಗೆ ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎನ್​ಆರ್​ಸಿ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಪ್ರಥಮ ಬಾರಿಗೆ ಅಸ್ಸೋಂನಲ್ಲಿ ಅನುಷ್ಠಾನಗೊಳಿಸಿದೆ. ಅಸ್ಸೋಂನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲಸಿದ್ದಾರೆಂಬುದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಆರೋಪವಾಗಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಲೆಂದು ಎನ್​ಆರ್​ಸಿ ಜಾರಿಗೆ ತರಲಾಯಿತು. ಅವರನ್ನು ಎನ್​ಆರ್​ಸಿ ಪಟ್ಟಿಗೆ ಸೇರಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಎನ್​ಆರ್​ಸಿ ಅಂತಿಮ ಪಟ್ಟಿಯಲ್ಲಿ 19 ಲಕ್ಷದಷ್ಟು ಜನರ ಹೆಸರನ್ನು ಕೈಬಿಡಲಾಗಿದೆ. ಸದ್ಯಕ್ಕೆ ಇವರನ್ನು ಶಂಕಿತ ಅಕ್ರಮ ವಲಸಿಗರೆಂದು ಪರಿಗಣಿಸಲಾಗಿದೆ. ಅಲ್ಲದೆ ಇವರಿಗೆ ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ಕಾಲಾವಕಾಶ ನೀಡಲಾಗಿದೆ.

ABOUT THE AUTHOR

...view details