ಕರ್ನಾಟಕ

karnataka

ETV Bharat / bharat

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ: ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚನೆ - undefined

ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧ ಕೇಳಿ ಬಂದಿದ್ದ ಆರೋಪದ ಮೇರೆಗೆ ತಕ್ಷಣ ಎಚ್ಚೆತ್ತುಕೊಂಡ ಸಿಜೆಐ ಸುಪ್ರೀಂಕೋರ್ಟ್​ ಈ ಬಗ್ಗೆ ವಿಚಾರಣೆ ನಡೆಸಿ, ಮಹಿಳೆ ಆರೋಪ ತಳ್ಳಿ ಹಾಕಿತ್ತು. ಸದ್ಯ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚನೆ ಮಾಡಲಾಗಿದೆ

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂ

By

Published : Apr 24, 2019, 12:27 PM IST

ನವದೆಹಲಿ:ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪವನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚನೆ ಮಾಡಿದೆ.

ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಲು ರಚನೆ ಮಾಡಿರುವ ಸಮಿತಿಯಲ್ಲಿ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇದ್ದಾರೆ. ಉಳಿದಂತೆ ಇಂದಿರಾ ಬ್ಯಾನರ್ಜಿ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಸಮಿತಿಯ ನೇತೃತ್ವ ವಹಿಸಿದ್ದರೆ, ಇನ್ನೊಬ್ಬ ನ್ಯಾಯಮೂರ್ತಿ ಎನ್‌.ವಿ.ರಮಣ ಸಹ ಸಮಿತಿ ಸದಸ್ಯರಾಗಿದ್ದಾರೆ.

ಗೊಗೊಯ್​ ಅವರ ​​ ಮಾಜಿ ನೌಕರರೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಸಂಬಂಧ ಎಲ್ಲ ನ್ಯಾಯಮೂರ್ತಿಗಳಿಗೆ ಅವರು ಪತ್ರ ಬರೆದಿದ್ದರು. ಈ ಬಗ್ಗೆ ನಾಲ್ಕು ಮಾಧ್ಯಮ ಸಂಸ್ಥೆಗಳು ಸುದ್ದಿ ಬಿತ್ತರಿಸಿದ್ದವು. ತಕ್ಷಣ ಎಚ್ಚೆತ್ತುಕೊಂಡ ಸಿಜೆಐ ಸುಪ್ರೀಂಕೋರ್ಟ್​ ಕಲಾಪ ಕರೆದು ಈ ಬಗ್ಗೆ ವಿಚಾರಣೆ ನಡೆಸಿ, ಮಹಿಳೆ ಆರೋಪ ತಳ್ಳಿ ಹಾಕಿತ್ತು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿದ ಸಿಜೆಐ ತಮ್ಮ ವಿರುದ್ಧ ಸಂಚು ನಡೆದಿದೆ ಎಂದು ಆರೋಪಿಸಿದ್ದರು. ಇನ್ನೊಂದೆಡೆ, ಸುಪ್ರೀಂಕೋರ್ಟ್​ ತರ್ತು ವಿಚಾರಣೆ ನಡೆಸಿ ಆರೋಪ ಅಲ್ಲಗಳೆದಿರುವ ಬಗ್ಗೆ ಬಾರ್​ ಕೌನ್ಸಿಲ್​​ನಲ್ಲಿ ಹಲವರು ಆಕ್ಷೇಪ ಎತ್ತಿದ್ದರು ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸಲು ಸಮಿತಿ ರಚಿಸುವ ತೀರ್ಮಾನವನ್ನು ಕೋರ್ಟ್ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಜೆಐ ವಿರುದ್ಧ ಆರೋಪ ಮಾಡಿದ ಮಹಿಳೆಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾ. ಬೊಬ್ಡೆ ನೇತೃತ್ವದ ಸಮಿತಿ ನೋಟಿಸ್​​ ಜಾರಿ ಮಾಡಿದೆ.

ಇನ್ನು ಪ್ರಕರಣದ ವಿಚಾರಣೆ ಮುಗಿಸಲು ಗಡುವು ನಿಗದಿಪಡಿಸಲಾಗಿಲ್ಲ ಎಂಬುದು ವಿಶೇಷ. ಸಮಿತಿ ರಚನೆ ಬಳಿಕ ಮಾತನಾಡಿರುವ ನ್ಯಾ. ಬೊಬ್ಡೆ, ಆರಂಭಿಕ ವಿಚಾರಣೆ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸ್ವತಂತ್ರ ತನಿಖೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಲೇಖಕರು ಆಗ್ರಹಿಸಿದ್ದರು. ಹಿರಿಯ ವಕೀಲ, ಪ್ರಶಾಂತ್ ಭೂಷಣ್, ಅರುಣಾ ರಾಯ್, ಮೇಧಾ ಪಾಟ್ಕರ್, ಲೇಖಕಿ ಅರುಂಧತಿ ರಾಯ್, ಪತ್ರಕರ್ತ ಪಿ.ಸಾಯಿನಾಥ್, ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್, ಸಿಪಿಐ ನಾಯಕಿ ಆಯನಿ ರಾಜಾ ಸೇರಿದಂತೆ 33 ಜನರು ಈ ಸಂಬಂಧ ಹೇಳಿಕೆ ಬಿಡುಗಡೆಗೊಳಿಸಿದ್ದರು.

For All Latest Updates

TAGGED:

ABOUT THE AUTHOR

...view details