ನವದೆಹಲಿ: ಮುಲ್ಲಪೆರಿಯಾರ್ ಡ್ಯಾಂ ಪ್ರಕರಣದ ವಿಚಾರಣೆಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹಿಂದೆ ಸರಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾವಹಿಸಿದ್ದಾರೆ. ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಇಂದಿನಿಂದ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಮುಲ್ಲಪೆರಿಯಾರ್ ಡ್ಯಾಂ ಪ್ರಕರಣ; ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಬೊಬ್ಡೆ - ಕೇರಳ
ಕೇರಳ ಮತ್ತು ತಮಿಳುನಾಡಿನ ಜಲವಿವಾದ ಕುರಿತ ಮುಲ್ಲಪೆರಿಯಾರ್ ಡ್ಯಾಂ ಪ್ರಕರಣದ ವಿಚಾರಣೆಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹಿಂದೆ ಸರಿದಿದ್ದಾರೆ. ಬೇರೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಸಿಜೆಐ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
![ಮುಲ್ಲಪೆರಿಯಾರ್ ಡ್ಯಾಂ ಪ್ರಕರಣ; ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಬೊಬ್ಡೆ cji-bobde-recuses-from-hearing-mullaperiyar-dam-case](https://etvbharatimages.akamaized.net/etvbharat/prod-images/768-512-8738682-thumbnail-3x2-bobde.jpg)
ಮುಲ್ಲಪೆರಿಯಾರ್ ಡ್ಯಾಂ ಪ್ರಕರಣ; ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಬೊಬ್ಡೆ
ಕೇರಳ ಮತ್ತು ತಮಿಳುನಾಡಿಗೆ ನೀರು ಹಂಚಿಕೆ ಮತ್ತು ಇತರೆ ಸಮಸ್ಯೆಗಳ ಕುರಿತ ಮುಲ್ಲಪೆರಿಯಾರ್ ಡ್ಯಾಂ ಪ್ರಕರಣ ಇದಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಸಾಗರವಿದೆ. ತಮಿಳುನಾಡು ಸರ್ಕಾರ ಇದರ ನಿರ್ವಹಣೆ ಮಾಡುತ್ತಿದೆ.
ನೀರು ಹರಿಯುವಿಕೆಯನ್ನು ತಮಿಳುನಾಡು ಸರ್ಕಾರ ಸರಿಯಾಗಿ ನಿಯಂತ್ರಿಸುತ್ತಿಲ್ಲ ಎಂದು ಕೇರಳ ಆರೋಪ ಮಾಡಿದೆ. ಇದಕ್ಕೆ ಪ್ರತಿಯಾಗಿ 2018 ಮತ್ತು 19ರಲ್ಲಿ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಪರಿಣಾಮ ಡ್ಯಾಂನಿಂದ ನೀರು ಹರಿಸಿಲ್ಲ ಎಂದು ತಮಿಳುನಾಡು ಸರ್ಕಾರ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.