ಕರ್ನಾಟಕ

karnataka

ETV Bharat / bharat

ಗುಪ್ತಾ ಫ್ಯಾಮಿಲಿಯ ₹200 ಕೋಟಿ ವೆಚ್ಚದ ಮದುವೆ​​... ತ್ಯಾಜ್ಯ ಕ್ಲೀನ್​​​ ಮಾಡಲು ಕಾರ್ಪೋರೇಷನ್​ ಹರಸಾಹಸ!

ಹಿಮಾಲಯದ ಚಮೋಲಿ ಜಿಲ್ಲೆಯ ಔಲಿಯಲ್ಲಿ ಸಿರಿವಂತ ಕುಟುಂಬವೊಂದರ ಮದುವೆ ನಡೆದಿತ್ತು. ಗುಪ್ತ ಕುಟುಂಬದ ಮಗನ ಮದುವೆ ಇದಾಗಿದ್ದು ಇದರ ಬಜೆಟ್ ಬರೋಬ್ಬರಿ​ ರೂ 200 ಕೋಟಿ ಆಗಿತ್ತು. ಮದುವೆ ನಡೆದ ಸ್ಥಳದಲ್ಲೇ ಈಗ ಕಸದ ರಾಸಿ ತುಂಬಿದೆ.

ಮದುವೆ ನಡೆದ ಸ್ಥಳದಲ್ಲಿ ಕಸದ ರಾಶಿ

By

Published : Jun 24, 2019, 6:37 PM IST

Updated : Jun 24, 2019, 7:17 PM IST

ಚಮೋಲಿ: ಕಳೆದ ಕೆಲ ದಿನಗಳ ಹಿಂದೆ ಉತ್ತರಾಖಂಡ್​ನ ಚಮೋಲಿ ಜಿಲ್ಲೆಯ ಬೌಲಿ ಎಂಬಲ್ಲಿ ಗುಪ್ತಾ ಫ್ಯಾಮಿಲಿ ಬರೋಬ್ಬರಿ 200ಕೋಟಿ ವೆಚ್ಚದಲ್ಲಿ ತನ್ನ ಮಗನ ಮದುವೆ ಕಾರ್ಯಕ್ರಮ ಆಯೋಜಿಸಿದ್ದರು. ಇದೀಗ ಸ್ಥಳದಲ್ಲಿನ ತ್ಯಾಜ್ಯ ಕ್ಲೀನ್​​​ ಮಾಡಲು ಕಾರ್ಪೋರೇಷನ್​ ಹರಸಾಹಸ ಪಡ್ತಿದೆ.

ಬೌಲಿ ಪ್ರದೇಶದಲ್ಲಿ ಜೂನ್​ 20ರಿಂದ 22ರವರೆಗೆ ಗುಪ್ತಾ ಫ್ಯಾಮಿಲಿ ಅಜಯ್​ ಗುಪ್ತಾ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಆಯೋಜನೆ ಮಾಡಿತ್ತು. ಈ ವೇಳೆ ಸ್ಥಳದಲ್ಲಿ ಸಾವಿರಾರು ಜಮಾಯಿಸಿದ್ದರು. ಕಾರ್ಯಕ್ರಮ ಮುಗಿದು ಹೋದ ಬಳಿಕ ಸ್ಥಳದಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಬಿದ್ದಿದೆ. ಅದನ್ನ ಗುಪ್ತಾ ಫ್ಯಾಮಿಲಿ ತೆಗೆದು ಹಾಕಿಲ್ಲ. ಹೀಗಾಗಿ ಕಾರ್ಪೋರೇಷನ್​ ಈ ಕೆಲಸಕ್ಕೆ ಇದೀಗ ಕೈ ಹಾಕಿದೆ. ಇನ್ನು ಗುಪ್ತಾ ಫ್ಯಾಮಿಲಿ ಮಗನ ಮದುವೆ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಮದುವೆ ಕಾರ್ಡ್​ ಸಿದ್ಧ ಮಾಡಿತ್ತು.

ವಿವಿಧ ರಾಜ್ಯದ ಮುಖ್ಯಮಂತ್ರಿ,ಬಾಲಿವುಡ್​ ಆ್ಯಕ್ಟರ್ಸ್​ಗಳಾದ ಕತ್ರಿನಾ ಕೈಪ್​, ಯೋಗಾ ಗುರು ಬಾಬಾ ರಾಮದೇವ್​ ಸಹ ಈ ಸ್ಥಳಕ್ಕೆ ಬಂದು ಹೋಗಿದ್ದರು. ಇದೀಗ ಸ್ಥಳದಲ್ಲಿ ಪ್ಲಾಸ್ಟಿಕ್​ ಬಾಟಲಿ, ಆಹಾರದ ಪ್ಯಾಕೆಟ್​, ಹೂವಿನ ಮಾಲೆಗಳು ಸೇರಿ ಅನೇಕ ತ್ಯಾಜ್ಯಗಳು ಬಿದ್ದಿವೆ. ಅದನ್ನ ತೆರವುಗೊಳಿಸುವ ಕಾರ್ಯದಲ್ಲಿ ಕಾರ್ಪೋರೇಷನ್​ ಮುಂದಾಗಿದೆ.

Last Updated : Jun 24, 2019, 7:17 PM IST

ABOUT THE AUTHOR

...view details