ನವದೆಹಲಿ:ಪ್ರತಿಪಕ್ಷಗಳ ವಿರೋಧದ ನಡುವೆಯೂ ಸೋಮವಾರ ತಡರಾತ್ರಿ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಇದೀಗ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ನಾಳೆ ಮಧ್ಯಾಹ್ನ 2 ಗಂಟೆಗೆ (ಬುಧವಾರ) ರಾಜ್ಯಸಭೆಯಲ್ಲಿ ವಿವಾದಿತ ಮಸೂದೆ ಮಂಡನೆಯಾಗಲಿದೆ.
ಲೋಕಸಭೆಯಲ್ಲಿ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದರು. ಇಲ್ಲಿ ಸತತ 12 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ಸೋಮವಾರ ರಾತ್ರಿ ಅಂಗೀಕರಿಸಲ್ಪಟ್ಟಿತ್ತು. ಮಸೂದೆ ಪರವಾಗಿ 293 ಸದಸ್ಯರು ಮತಗಳು ಬಿದ್ದರೆ, 82 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.
ಆದರೀಗ ಮಸೂದೆಗೆ ಲೋಕಸಭೆ ಅನುಮೋದನೆ ದೊರೆತ ಪರಿಣಾಮ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ದೆಹಲಿಯಲ್ಲಿ ಪಾಕ್ ಮೂಲದ ಹಿಂದೂಗಳ ಸಂಭ್ರಮ:
ದೆಹಲಿಯ ಮಜ್ನುಕಾ ಟಿಲಾ ಪ್ರದೇಶದಲ್ಲಿ ವಾಸಿಸಿರುವ ಪಾಕಿಸ್ತಾನ ಮೂಲಕ ಹಿಂದೂಗಳು ಈ ಮಸೂದೆಗೆ ಅನುಮೋದನೆ ದೊರೆತಿದ್ದಕ್ಕೆ ಸಂಭ್ರಮಿಸಿದರು.
ಮಸೂದೆಗೆ ಬೆಂಬಲ ನೀಡಲ್ಲ: ಶಿವಸೇನೆ ನಿಲುವು