ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಕೊರೊನಾ ಯುದ್ಧ ಸಂದರ್ಭದಲ್ಲಿ ಪ್ರೇರಕ ಶಕ್ತಿಯಾಗಿರುವ ನಾಗರಿಕರು..! - ಕೊರೊನಾ ಯುದ್ಧ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಒಂದು ಲಕ್ಷ ತಲುಪಲು 110 ದಿನಗಳನ್ನು ತೆಗೆದುಕೊಂಡರೆ, ಕೇವಲ 39 ದಿನಗಳಲ್ಲಿ ಐದು ಲಕ್ಷ ಗಡಿ ತಲುಪಿದೆ.

COVID-19 WAR
ಕೊರೊನಾ ಯುದ್ಧ

By

Published : Jul 2, 2020, 4:55 PM IST

ಹೈದರಾಬಾದ್:ಪ್ರಪಂಚದಾದ್ಯಂತ ಕೋವಿಡ್​​ ಪ್ರಕರಣಗಳ ಸಂಖ್ಯೆ ಒಂದು ಕೋಟಿಯನ್ನು ಮೀರಿದ್ದು, ಅವುಗಳಲ್ಲಿ ಮೂರನೇ ಎರಡರಷ್ಟು ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಒಂದು ಲಕ್ಷ ತಲುಪಲು 110 ದಿನಗಳನ್ನು ತೆಗೆದುಕೊಂಡರೆ, ಕೇವಲ 39 ದಿನಗಳಲ್ಲಿ ಐದು ಲಕ್ಷ ಗಡಿ ತಲುಪಿದೆ. ಕೋವಿಡ್​​ನಿಂದ ಸಾವಿಗೀಡಾದವರ ಸಂಖ್ಯೆ 16,000 ಗಡಿ ದಾಟಿದೆ. ಕೇಂದ್ರದ ಸಂಶೋಧನೆಗಳ ಪ್ರಕಾರ, 8 ರಾಜ್ಯಗಳಲ್ಲಿ ಶೇಕಡಾ 87 ರಷ್ಟು ಸಾವು ದಾಖಲಾಗಿದೆ.

ದೇಶದಲ್ಲಿ ಶೇಕಡ 61 ರಷ್ಟು ಕೋವಿಡ್​​ ಪ್ರಕರಣಗಳು ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡಿನಲ್ಲಿ ದಾಖಲಾಗಿವೆ. ಒಂದು ಕಡೆ, ಭಾರತವು ಇನ್ನೂ ಕೊವಿಡ್ ನ ಉತ್ಕರ್ಷ ಸ್ಥಿತಿ ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಮತ್ತೊಂದೆಡೆ, ಭೂತಾನ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳು ವೈರಸ್‌ನಿಂದ ಮುಕ್ತಿ ಕಂಡಿವೆ.

ಏಷ್ಯಾದ ಅತಿದೊಡ್ಡ ಕೊಳೆಗೇರಿ ಮತ್ತು ಪ್ರಮುಖ ವೈರಸ್ ಹಾಟ್ಸ್ಪಾಟ್ ಆಗಿರುವ ಧಾರವಿ ಜನಸಂಖ್ಯಾ ಸಾಂದ್ರತೆಯಲ್ಲಿ ಪ್ರತಿ ಚದರ ಕಿಲೋಮೀಟರಿಗೆ 3,54,167ರಷ್ಟು ಹೊಂದಿದೆ. ನಿವಾಸಿಗಳ ಸ್ವಯಂ-ಶಿಸ್ತಿನೊಂದಿಗೆ ಸರ್ಕಾರದ ವ್ಯವಸ್ಥಿತ ಕಾರ್ಯಚರಣೆಯಿಂದಾಗಿ ಕೊಳೆಗೇರಿ ಪರವಾಗಿ ಕೆಲಸ ಮಾಡಿದ್ದು ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶ ಕಂಡಿದೆ.

ಬ್ರಿಟನ್, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್‌ನ ಒಟ್ಟು ಜನಸಂಖ್ಯೆ 24 ಕೋಟಿ, ಇದರಲ್ಲಿ ಕೊವಿಡ್ ಗೆ ಬಲಿಯಾದವರ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು , ಆದರೆ ಅಷ್ಟೆ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಸಾವಿನ ಸಂಖ್ಯೆ ಕೇವಲ 700 ಆಗಿದೆ. ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮಗಳ ಪಯತ್ನದ ಫಲವಾಗಿ ಕೊವಿಡ್ ನಿಯಂತ್ರಣ ದೇಶದಲ್ಲಿ ಸಾಧ್ಯವಾಗಿದೆ.

2018ರಲ್ಲಿ ಬಂದ ನಿಫಾ ವೈರಸ್ ನ ನಿರ್ವಹಣೆಯ ಅನುಭವದ ಪಾಠ, ತನ್ನ ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸುಸಂಘಟಿತ ಆಡಳಿತ ವ್ಯವಸ್ಥೆಯ ಮೂಲಕ ಕೋವಿಡ್​​ ಯುದ್ಧ ಗೆದ್ದ ನಾಯಕನಾಗಿ ಕೇರಳ ಹೊರಹೊಮ್ಮಿದೆ. ಒಡಿಶಾ ಕೂಡ ಭಾರಿ ಸಂಪನ್ಮೂಲ ಬಿಕ್ಕಟ್ಟಿನ ನಡುವೆಯೂ ‘ಹೋಗು; ಎಂಬ ಪದದ ಮೂಲಕ ವೈರಸ್ ಅನ್ನು ನಿಯಂತ್ರಿಸುವಲ್ಲಿ ಯಶಸ್ವು ಕಂಡಿದೆ.

ಕೋವಿಡ್​​ ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ 5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಗಗನಕ್ಕೇರಿದ ಪ್ರಕರಣಗಳನ್ನು ಅವಲೋಕಿಸಿದರೆ ಆತಂಕಕಾರಿ ಚಿತ್ರಣ ಮನೆಮಾಡಿದೆ. ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವೈರಸ್‌ ಹರಡುವಿಕೆಯನ್ನು ನಿಯಂತ್ರಿಸಿವೆ. ಭಾರತಕ್ಕೆ ಇದು ಸಾಧ್ಯವಾಗಬಹುದೆ..?

ಹಲವು ವರ್ಷಗಳಿಂದೇಚೆಗೆ, ಸಾರ್ವಜನಿಕ ಆರೋಗ್ಯದ ಮೇಲೆ ಸರಕಾರದ ವೆಚ್ಚದ ಮೌಲ್ಯವು ಭಾರತದ ಒಟ್ಟು ಜಿಡಿಪಿಯಲ್ಲಿ ಕೇವಲ 1.5 ಪ್ರತಿಶತದಷ್ಟಿದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿಯೂ ಕೂಡ, ನಮ್ಮ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳ ಕೆಟ್ಟ ಸ್ಥಿತಿ ಅತ್ಯಂತ ಕಳಪೆ ಯಾಗಿವೆ ಎನ್ನುವುದು ಎಲ್ಲರ ಸಾಮಾನ್ಯ ಜ್ಞಾನ. ಮತ್ತಷ್ಟು ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುಲು ಅಗತ್ಯ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡುವುದೇ ಲಾಕ್‌ಡೌನ್ ಉದ್ದೇಶವಾಗಿತ್ತು. ಕೇಂದ್ರದ ಅಂದಾಜಿನ ಪ್ರಕಾರ, ಲಾಕ್‌ಡೌನ್ ನಂತರ ಕೊವಿಡ್ ಹರಡುವಿಕೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡಿತ್ತು.

ಭಾರತದಲ್ಲಿ ಕೋವಿಡ್​​ ಪರೀಕ್ಷೆ ಪ್ರತಿ ದಿನಕ್ಕೆ 3 ಲಕ್ಷವಾಗಿದ್ದರೂ, ನಮ್ಮ ಹದಗೆಟ್ಟ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಆಸ್ಪತ್ರೆ ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಬಹುದೇ? ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಬೇಕಾಗಬಹುದು ಎಂದು ಕೇಂದ್ರ ಹೇಳಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿದರೂ ಕೂಡ ತರಬೇತಿ ಹೊಂದಿರುವ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ನಾವು ಹೇಗೆ ನಿವಾರಿಸಬಹುದು..? ಭಾರತದಲ್ಲಿ ಇದರ ಪರಿಣಾಮ ಕಡಿಮೆ ತೀವ್ರವಾಗಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರೂ, ಪ್ರತಿ ಮಿಲಿಯನ್‌ಗೆ ಕೇವಲ 12 ಸಾವುಗಳು ದೇಶದಲ್ಲಿ ಸಂಭವಿಸುತ್ತಿವೆ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಜನರು ಪ್ರೇರಕ ಶಕ್ತಿ ಎಂದು ಮೋದಿ ವ್ಯಾಖ್ಯನಿಸಿದ್ದರು.

ಕೋವಿಡ್​​ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದಂತೆ, ಹಲವಾರು ರಾಜ್ಯಗಳು ಮತ್ತೊಂದು ಲಾಕ್ ಡೌನ್ ಗೆ ತಯಾರಿನಡೆಸಿವೆ. ಈ ಸನ್ನಿವೇಶಗಳ ಮಧ್ಯೆ, ಪ್ರತಿಯೊಬ್ಬ ನಾಗರಿಕನು ಕೊವಿಡ್ ವಿರುದ್ಧದ ಹೋರಾಟಕ್ಕೆ ಸಜ್ಜಾಗಬೇಕು. ಸಾಮಾಜಿಕ ಅಂತರ, ಸ್ವಯಂ-ಪ್ರತ್ಯೇಕತೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಮೂಲಕ, ರಾಷ್ಟ್ರಕ್ಕೆ ಸಹಾಯ ಮಾಡುವಲ್ಲಿ ನಾವೆಲ್ಲರೂ ನಮ್ಮ ಪಾತ್ರವನ್ನು ನಿರ್ವಹಿಸಬಹುದು.

ABOUT THE AUTHOR

...view details