ಕರ್ನಾಟಕ

karnataka

ETV Bharat / bharat

ಜೈಲಲ್ಲಿ ಯುರೋಪಿಯನ್​ ಫುಡ್​ಗೆ ಬೇಡಿಕೆ ಇಟ್ಟ ಅಗಸ್ಟಾ ವೆಸ್ಟ್​ಲ್ಯಾಂಡ್​ ಆರೋಪಿ

ಅಗಸ್ಟಾ ವೆಸ್ಟ್​ ಲ್ಯಾಂಡ್ ಹೆಲಿಕಾಪ್ಟರ್​ ಹಗರಣದ ಆರೋಪಿ ಕ್ರಿಶ್ಚಿಯನ್​ ಮೈಕೆಲ್​ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾನೆ.

By

Published : Mar 21, 2019, 1:32 PM IST

ಸಂಗ್ರಹ ಚಿತ್ರ- ಕ್ರಿಶ್ಚಿಯನ್​ ಮೈಕೆಲ್

ನವದೆಹಲಿ: ತಿಹಾರ್​ ಜೈಲಿನಲ್ಲಿರುವ ಅಗಸ್ಟಾ ವೆಸ್ಟ್​ ಲ್ಯಾಂಡ್ ಹೆಲಿಕಾಪ್ಟರ್​ ಹಗರಣದ ಆರೋಪಿ ಕ್ರಿಶ್ಚಿಯನ್​ ಮೈಕೆಲ್​ ಯುರೋಪಿಯನ್​ ಫುಡ್​ ಬೇಕೆಂದು ಪಟ್ಟು ಹಿಡಿದಿದ್ದು, ಆರೋಪಿಯ ಬೇಡಿಕೆಗಳು ಪೊಲೀಸರಿಗೆ ತಲೆನೋವು ತಂದಿದೆ.

ಕ್ರಿಶ್ಚಿಯನ್​ ಮೈಕೆಲ್​ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾನೆ. ತನ್ನನ್ನು ಜೈಲಿನಲ್ಲಿ ಕೋತಿ ರೀತಿಯಲ್ಲಿ ಇಡಲಾಗಿದೆ. ಜತೆಗಿರುವ ಸಹ ಕೈದಿಗಳು ತೆರೆದ ಜಾಗದಲ್ಲೇ ಬಹೀರ್ದೆಸೆ ಮಾಡುತ್ತಿದ್ದು ತನಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ದೂರು ನೀಡಿದ್ದಾನೆ.

ಕ್ರಿಶ್ಚಿಯನ್​ ಮೈಕೆಲ್​ಗೆ ಮೀಸಲಿರಿಡಿರುವ ಜೈಲು ಕೊಠಡಿಯಲ್ಲಿ ಇನ್ನಿಬ್ಬರು ಸಹ ಕೈದಿಗಳಿದ್ದು ಅವರೂ ಸಹ ವಿತ್ತೀಯ ಅಪರಾಧಿಗಳಾಗಿದ್ದಾರೆ. ಸದ್ಯ ಇರುವ ಜೈಲು ಕೊಠಡಿಯು ಕಿರಿದಾಗಿದ್ದು, ಇದಕ್ಕಿಂತ ಮೂರು ಪಟ್ಟು ದೊಡ್ಡದಾದ ಕೊಠಡಿ ಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾನೆ.

ಈ ಹಿಂದಿದ್ದ ಜೈಲು ಕೊಠಡಿಯಿಂದ ಈಗಷ್ಟೆ ಮೈಕೆಲ್​ನನ್ನು ಸ್ಥಳಾಂತರಿಸಲಾಗಿದೆ. ತನ್ನ ಜತೆ ಕೊಲೆ ಆರೋಪಿಗಳನ್ನಿಡಲಾಗಿದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಬೇರೆ ಕೊಠಡಿಗೆ ಶಿಫ್ಟ್​ ಮಾಡಲಾಗಿತ್ತು.

ಜೈಲೂಟ ಏನು? ತಿಹಾರ್​ ಜೈಲಿನಲ್ಲಿ ರಾಜಕೀಯ ಅಪರಾಧಿಗಳು ಹಾಗೂ ವಿವಿಐಪಿ ಆರೋಪಿಗಳಿರುವ ಕಾರಣ ಸ್ವಲ್ಪ ಗುಣಮಟ್ಟದ ಊಟ, ತಿಂಡಿ ಕೊಡಲಾಗುತ್ತದೆ. ಬೆಳಗಿನ ಉಪಹಾರಕ್ಕೆ ಟೀ, ಬಿಸ್ಕತ್​, ಬ್ರೆಡ್​ ಹಾಗೂ ಹಲ್ವಾ ಕೊಡಲಾಗುತ್ತದೆ.

ABOUT THE AUTHOR

...view details