ಚಿತ್ತೂರು (ಆಂಧ್ರ ಪ್ರದೇಶ) : ಕುವೈತ್ನಿಂದ ಅಕ್ರಮವಾಗಿ ಬಂದೂಕು ಮತ್ತು ಗುಂಡುಗಳನ್ನು ತರಿಸಿಕೊಂಡು ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಚಿತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದುಂ ಪ್ರದೇಶದ ಬಾಬಾ ಫಾರೂಕ್ ಅಲಿಯಾಸ್ ಫಯಾಝ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಅಕ್ರಮವಾಗಿ ಬಂದೂಕು ಮತ್ತು ಗುಂಡುಗಳನ್ನು ಸಾಗಿಸುತ್ತಿದ್ದ. ಮಾಹಿತಿ ತಿಳಿದು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಎರಡು ರಿವಾಲ್ವರ್ಗಳು ಮತ್ತು 29 ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಂಬೈನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಬಾಬಾ ಫಾರೂಕ್, ಕುವೈತ್‌ನಲ್ಲಿ ವಾಸಿಸುವ ತನ್ನ ಸಹೋದರನ ಸೂಚನೆಯ ಮೇರೆಗೆ ಈ ಕಾರ್ಯಚರಣೆಗೆ ಇಳಿಯುತ್ತಿದ್ದ. ಮುಂಬೈಯಿಂದ ಬಂದ ಬಳಿಕ ಬಾಬಾ ಫಾರೂಕ್ ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಅಡಗಿಕೊಳ್ಳಲು ಯತ್ನ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಕ್ರಮ ಬಂದೂಕು ಮತ್ತು ಗುಂಡುಗಳ ಸಾಗಾಟ ಪ್ರಕರಣ ಸುದ್ದಿ ಸಂಗ್ರಹಿಸಿದ್ದ ಪೊಲೀಸರು ದಾರಿ ಮಧ್ಯೆ ಮದನಪಲ್ಲೆಯ ವೆಂಪಲ್ಲಿ ಎಂಬಲ್ಲಿ ಆರೋಪಿ ಬಾಬಾ ಫಾರೂಕ್ನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ರಿಮಾಂಡ್ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.