ಪಾಟ್ನಾ (ಬಿಹಾರ):ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟಗಳಿಗೆ ರಾಜ್ಯ ಸರ್ಕಾರ ವಿಳಂಬವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ಲೋಕ ಜನಶಕ್ತಿ ಪಕ್ಷ ಖಂಡಿಸಿದೆ.
ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ, ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬರೆದ ಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಅದರ ಮೂಲಕ ಸರಕಾರದ ನಡೆಯನ್ನು ಖಂಡಿಸಿದರು.
ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಮಾಡಿದ ವ್ಯವಸ್ಥೆ ತೃಪ್ತಿದಾಯಕವಾಗಿಲ್ಲ. ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತಲುಪುವಂತೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ನಂಬಿದ್ದರು, ಆದರೆ ರಾಜ್ಯ ಸರ್ಕಾರದ ಕ್ರಮ ಅಸಮರ್ಪಕವಾಗಿವೆ ಎಂದು ಅವರು ಹೇಳಿದರು.
ಊರಿಗೆ ತೆರಳಬೇಕಾದ ವಲಸೆ ಕಾರ್ಮಿಕರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕಾಗಿರುವುದು ಕಾರ್ಮಿಕರಿಗೆ ಕಷ್ಟದ ಕೆಲಸವಾಗಿದೆ. ಅವರು ಅಷ್ಟೊಂದು ಶಿಕ್ಷಿತರಲ್ಲ. ಆದ್ದರಿಂದ ಸರ್ಕಾರದ ನಡೆ ಸರಿಯಿಲ್ಲ ಎಂದು ಅವರು ಟೀಕಿಸಿದರು.