ಕರ್ನಾಟಕ

karnataka

ETV Bharat / bharat

ಟಿಕ್​ಟಾಕ್​ಗೆ ಪರ್ಯಾಯವಾದ ಚಿಂಗಾರಿ: 1 ಲಕ್ಷ ಡೌನ್‌ಲೋಡ್- ಗಂಟೆಗೆ 2 ಮಿಲಿಯನ್ ವೀಕ್ಷಣೆ! - ಚೈನೀಸ್ ಟಿಕ್​ಟಾಕ್​ಗೆ ದೇಸಿ ಪರ್ಯಾಯ ಚಿಂಗಾರಿ

ರಾಷ್ಟ್ರೀಯ ಭದ್ರತಾ ಕಾಳಜಿಗಳಿಗಾಗಿ 59 ಚೀನೀ ಅಪ್ಲಿಕೇಶನ್‌ಗಳನ್ನು ಸರ್ಕಾರ ನಿಷೇಧಿಸಿದಾಗಿನಿಂದ ಚಿಂಗಾರಿ ಆ್ಯಪ್ ಸುಮಾರು 1 ಲಕ್ಷ ಡೌನ್‌ಲೋಡ್‌ ಮತ್ತು ಗಂಟೆಗೆ 2 ಮಿಲಿಯನ್ ವೀಕ್ಷಣೆ ಗಳಿಸಿದೆ. ಈಗಾಗಲೇ 3 ದಶಲಕ್ಷಕ್ಕೂ ಹೆಚ್ಚು ಜನ ಡೌನ್‌ಲೋಡ್ ಮಾಡಿದ್ದಾರೆ.

chingari
chingari

By

Published : Jun 30, 2020, 1:37 PM IST

ಬೆಂಗಳೂರು:ಚೀನಾದ ಟಿಕ್‌ಟಾಕ್ ಆ್ಯಪ್​ನ ದೇಸಿ ಪರ್ಯಾಯವಾದ ಚಿಂಗಾರಿ ಆ್ಯಪ್​​​​​ ಅನ್ನು ಭಾರತೀಯರು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಳಜಿಗಳಿಗಾಗಿ 59 ಚೀನೀ ಅಪ್ಲಿಕೇಶನ್‌ಗಳನ್ನು ಸರ್ಕಾರ ನಿಷೇಧಿಸಿದಾಗಿನಿಂದ ಈ ಆ್ಯಪ್ ಸುಮಾರು 1 ಲಕ್ಷ ಡೌನ್ಲೋಡ್​​​​​​‌ ಮತ್ತು ಗಂಟೆಗೆ 2 ಮಿಲಿಯನ್ ವೀಕ್ಷಣೆ ಗಳಿಸಿದೆ. ಈಗಾಗಲೇ 3 ದಶಲಕ್ಷಕ್ಕೂ ಹೆಚ್ಚು ಜನ ಡೌನ್‌ಲೋಡ್ ಮಾಡಿದ್ದಾರೆ.

ಕಳೆದ ವರ್ಷ ಬೆಂಗಳೂರು ಮೂಲದ ಪ್ರೋಗ್ರಾಮರ್‌ಗಳಾದ ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅವರು ಈ ಆ್ಯಪ್ ಸ್ಥಾಪಿಸಿದ್ದು, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಟಿಕ್‌ಟಾಕ್​ನ ಇನ್ನೊಂದು ಪರ್ಯಾಯ ಮಿತ್ರೋ ಆ್ಯಪ್​​​ ಕೂಡಾ ಚಿಂಗಾರಿ ಮೀರಿಸಿದೆ.

"ಭಾರತೀಯರು ಈಗ ಟಿಕ್​ಟಾಕ್‌ಗೆ ಪರ್ಯಾಯವಾಗಿ ಸ್ವದೇಶಿ ಮತ್ತು ಮನರಂಜನೆಯ ಆ್ಯಪ್ ಬಯಸುತ್ತಿದ್ದಾರೆ. ಹೀಗಾಗಿ ನಮ್ಮ ಅಪ್ಲಿಕೇಶನ್‌ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ" ಎಂದು ಪ್ರೋಗ್ರಾಮರ್‌ ಬಿಸ್ವತ್ಮಾ ನಾಯಕ್ ಹೇಳಿದ್ದಾರೆ.

ಎಂದಿಗೂ ಟಿಕ್‌ಟಾಕ್ ಬಳಸದ ಕೈಗಾರಿಕೋದ್ಯಮ ಆನಂದ್ ಮಹೀಂದ್ರಾ ಚಿಂಗಾರಿಯನ್ನು ಡೌನ್‌ಲೋಡ್ ಮಾಡಿ ಅದರ ಬಗ್ಗೆ ಟ್ವೀಟ್ ಮಾಡಿದ್ದು, ನಿಮಗೆ ಹೆಚ್ಚಿನ ಶಕ್ತಿ ಲಭಿಸಲಿ ಎಂದು ಹೇಳಿದ್ದಾರೆ.

ಚಿಂಗಾರಿ ಅಪ್ಲಿಕೇಶನ್‌ನ ವೈಶಿಷ್ಟ್ಯಗಳು:

ಚಿಂಗಾರಿ ಬಳಕೆದಾರರಿಗೆ ಆ್ಯಪ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್ಲೋಡ್​​​ ಮಾಡಲು, ಸ್ನೇಹಿತರೊಂದಿಗೆ ಚಾಟ್ ಮಾಡಲು, ಹೊಸ ಜನರೊಂದಿಗೆ ಸಂವಹನ ನಡೆಸಲು, ವಿಷಯ ಹಂಚಿಕೊಳ್ಳಲು ಮತ್ತು ಫೀಡ್ ಮೂಲಕ ಬ್ರೌಸ್ ಮಾಡಲು ಅವಕಾಶ ನೀಡುತ್ತದೆ.

ಇಂಗ್ಲಿಷ್, ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ವಿಷಯ ರಚನೆಕಾರರ ವಿಡಿಯೋ ಎಷ್ಟು ವೈರಲ್ ಆಗುತ್ತದೆ ಎಂಬುದರ ಆಧಾರದ ಮೇಲೆ ಚಿಂಗಾರಿ ತನ್ನ ಬಳಕೆದಾರರಿಗೆ ಪಾವತಿಸುತ್ತದೆ. ಚಿಂಗಾರಿ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ.

ABOUT THE AUTHOR

...view details