ಕರ್ನಾಟಕ

karnataka

ಗಾಲ್ವಾನ್​ನಿಂದ ಹಿಂದೆ ಸರಿದ ಚೀನಾ ಸೇನೆ: ಶಸ್ತ್ರಸಜ್ಜಿತ ವಾಹನಗಳು ಅಲ್ಲೇ ಠಿಕಾಣಿ..!

ವಿವಾದಿತ ಗಾಲ್ವಾನ್​ ಕಣಿವೆಯಿಂದ ಚೀನಾ ಸೇನೆ ಸುಮಾರು 2 ಕಿಲೋಮೀಟರ್​ ಹಿಂದಕ್ಕೆ ಸರಿದಿದೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡು ರಾಷ್ಟ್ರಗಳು ಕಮಾಂಡರ್ ಹಂತದ ಮಾತುಕತೆಗಳನ್ನು ನಡೆಸಿದ್ದರೂ ಅದು ಫಲಪ್ರದವಾಗಿರಲಿಲ್ಲ. ಕಾಲ್ಕರೆದು ಜಗಳಕ್ಕೆ ಬಂದಿದ್ದ ಚೀನಾ ಹಿಂದೆ ಸರಿದಿರುವುದು ಭಾರತಕ್ಕೆ ಆಶಾದಾಯಕವಾಗಿದೆ.

By

Published : Jul 6, 2020, 1:10 PM IST

Published : Jul 6, 2020, 1:10 PM IST

ಲೇಹ್​ (ಲಡಾಖ್​):ಪೂರ್ವ ಲಡಾಖ್​ನ ಲೈನ್​ ಆಫ್​ ಆಕ್ಚುವಲ್ ಕಂಟ್ರೋಲ್​ ಬಳಿಯ ಗಾಲ್ವಾನ್ ಕಣಿವೆಯಲ್ಲಿ ಬೀಡು ಬಿಟ್ಟಿದ್ದ ಚೀನಿ ಸೇನೆ ಸುಮಾರು 2 ಕಿಲೋಮೀಟರ್ ಹಿಂದಕ್ಕೆ ಸರಿದಿದೆ ಎಂದು ಸೇನಾ ಮೂಲಗಳು ಸ್ಪಷ್ಟನೆ ನೀಡಿವೆ.

ಚೀನಾ ಮತ್ತು ಭಾರತದ ನಡುವೆ ಸಂಘರ್ಷ ನಡೆದಾಗಿನಿಂದ ಸುಮಾರು ಮೂರು ಹಂತಗಳಲ್ಲಿ ಸೇನಾ ಮಾತುಕತೆಗಳು ನಡೆದಿದೆ. ಈ ವೇಳೆ ಉಭಯ ಸೇನೆಗಳು ಕೆಲವು ಭಾಗಗಳಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದವು. ಆದರೆ ಕಾರ್ಯೋನ್ಮುಖವಾಗಿರಲಿಲ್ಲ.

ಚೀನಾ ಮಾತುಕತೆಗಳ ಮೂಲಕ ಸೇನೆ ಹಿಂತೆಗೆದುಕೊಳ್ಳುವ ಭರವಸೆ ನೀಡುತ್ತಿತ್ತು. ಇನ್ನೊಂದೆಡೆ ಗಡಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡಿಸುವುದು ಮಾತ್ರವಲ್ಲದೇ ಸುಮಾರು 10 ಸಾವಿರ ಸೈನಿಕರನ್ನು ಲಡಾಖ್​ ಗಡಿಯಲ್ಲಿ ಜಮಾವಣೆ ಮಾಡಿತ್ತು. ಇದರಿಂದಾಗಿ ಎರಡೂ ರಾಷ್ಟ್ರಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡು ರಾಷ್ಟ್ರಗಳು ಕಮಾಂಡರ್ ಹಂತದ ಮಾತುಕತೆಗಳನ್ನು ನಡೆಸಿದ್ದರೂ ಅದು ಫಲಪ್ರದವಾಗಿರಲಿಲ್ಲ. ಈಗ ಸುಮಾರು 2 ಕಿಲೋಮೀಟರ್​ ಹಿಂದೆ ಸರಿದಿರುವುದು ಭಾರತಕ್ಕೆ ಆಶಾದಾಯಕವಾಗಿ ಕಾಣಿಸಿಕೊಂಡಿದೆ.

ಗಾಲ್ವಾನ್​ ಪ್ರದೇಶದಿಂದ ಹಿಂದೆ ಸರಿದರೂ ಕೂಡಾ ಈ ಮೊದಲೇ ಬೀಡುಬಿಟ್ಟಿದ್ದ, ಬೃಹತ್ ಶಸ್ತ್ರ ಸಜ್ಜಿತ ವಾಹನಗಳು ಹಾಗೂ ಟೆಂಟ್​ಗಳನ್ನು ತೆರವು ಮಾಡಿಲ್ಲ. ಚೀನಾದ ನಡೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ABOUT THE AUTHOR

...view details