ಚೆನ್ನೈ: ಭಾರತದ ಜೊತೆಗಿನ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತಕ್ಕೆ ಆಗಮಿಸಿದ್ದಾರೆ.
ಚೆನ್ನೈನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಸಿ ಜಿನ್ಪಿಂಗ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕ್ಸಿ ಜಿನ್ಪಿಂಗ್ ಅವರನ್ನ ಸ್ವಾಗತಿಸಿದರು.
ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಹಲವು ಜಾನಪದ ನೃತ್ಯ ತಂಡಗಳು ಮತ್ತು ಸಂಗೀತ ತಂಡಗಳು ತಮ್ಮ ಕಲೆಯನ್ನ ಪ್ರದರ್ಶಿಸುವ ಮೂಲಕ ಚೀನಾ ಅಧ್ಯಕ್ಷರನ್ನ ಸ್ವಾಗತಿಸಿದ್ರು.
ಕ್ಸಿ ಜಿನ್ಪಿಂಗ್ ವಿಮಾನ ನಿಲ್ದಾಣದಿಂದ ನೇರವಾಗಿ ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಲಾ ಹೋಟೆಲ್ ತಲುಪಿದ್ದಾರೆ. ಹೋಟೆಲ್ನಲ್ಲಿ ಚೀನಾ ಅಧ್ಯಕ್ಷರ ಭೋಜನಕೂಟಕ್ಕೆ ತಮಿಳುನಾಡಿನ ತಿನಿಸುಗಳಾದ ತಕ್ಕಲಿ ರಸಂ, ಅರಚವಿಟ್ಟ ಸಾಂಬಾರ್, ಕಡಲೈ ಕುರುಮಾ ಮತ್ತು ಕವನರಸಿ ಹಲ್ವಾ ನೀಡಲಾಗುವುದು.