ನವದೆಹಲಿ:ಭಾರತೀಯ ಸೈನಿಕರು ನಿಯಮ ಉಲ್ಲಂಘನೆ ಮಾಡುತ್ತಿದ್ದು, ಪಾಂಗೊಂಗ್ ತ್ಸೋ ಸರೋವರದ ಬಳಿ ಇರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (LAC)ಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಆರೋಪಿಸಿದೆ.
ಗಡಿಯಲ್ಲಿ ಭಾರತೀಯ ಪಡೆಯಿಂದಲೇ ಅತಿಕ್ರಮಣ: ಚೀನಾ - ವಾಸ್ತವಿಕ ಗಡಿ ನಿಯಂತ್ರಣ ರೇಖೆ
ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತೀಯ ಪಡೆ LAC ಅತಿಕ್ರಮಣ ಮಾಡಿದೆ. ಚೀನಾ ಭಾರತಕ್ಕೆ ಪ್ರಾತಿನಿಧ್ಯ ನೀಡುತ್ತದೆ. ಅದರಂತೆಯೇ ಭಾರತ ತಮ್ಮ ಸೇನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಆಗಸ್ಟ್ 29 ಮತ್ತು 30ರ ತಡರಾತ್ರಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರು ಭಾರತದೊಳಗೆ ನುಸುಳಲು ಯತ್ನಿಸಿದ್ದು, ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತೀಯ ಪಡೆ ಇವರನ್ನು ತಡೆದಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕರ್ನಲ್ ಅಮನ್ ಆನಂದ್ ನಿನ್ನೆ ತಿಳಿಸಿದ್ದರು. ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಚೀನಾ, ಒಳನುಸುಳಿದ್ದು ನಮ್ಮವರಲ್ಲ, ಭಾರತೀಯ ಪಡೆ ಎಂದು ಉಲ್ಟಾ ಹೊಡೆದಿದೆ.
ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿ, ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತೀಯ ಪಡೆ LAC ಅತಿಕ್ರಮಣ ಮಾಡಿದೆ. ಚೀನಾ ಭಾರತಕ್ಕೆ ಪ್ರಾತಿನಿಧ್ಯ ನೀಡುತ್ತದೆ. ಅದರಂತೆಯೇ ಭಾರತ ತಮ್ಮ ಸೇನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ ಎಂದು ತಿಳಿಸಿದೆ.