ಕರ್ನಾಟಕ

karnataka

ಚೀನಾ ಮಹತ್ವಾಕಾಂಕ್ಷೆಯ ಯಾರ್ಲುಂಗ್ ತ್ಸಾಂಗ್ಪೋ ಯೋಜನೆ.. ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!!?

By

Published : Dec 15, 2020, 9:11 PM IST

ಬ್ರಹ್ಮಪುತ್ರ ನದಿಗೆ ವಿದ್ಯುತ್ ಉತ್ಪಾದಿಸಲು ಅಣೆಕಟ್ಟು ಮಾಡುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆ ಅಗ್ಗದ ಜಲಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಇದರಿಂದ ಭಾರತದ ಗಡಿ ಪ್ರದೇಶಗಳಿಗೆ ಅಪಾರ ಹಾನಿ ಇದೆ ಎಂದು ವರದಿಗಳು ತಿಳಿಸಿವೆ.

tsangpo
ಯಾರ್ಲುಂಗ್ ತ್ಸಾಂಗ್ಪೋ ಯೋಜನೆ

ನವದೆಹಲಿ: ಯಾರ್ಲುಂಗ್ ತ್ಸಾಂಗ್ಪೋ-ಬ್ರಹ್ಮಪುತ್ರ ನದಿಗೆ ವಿದ್ಯುತ್ ಉತ್ಪಾದಿಸಲು ಅಣೆಕಟ್ಟು ಮಾಡುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆ ಯಾವುದೇ ಸಮಾನಾಂತರತೆಯನ್ನು ಹೊಂದಿಲ್ಲ. ಅಪಾಯದ ಪ್ರಮಾಣದಲ್ಲಿ ಇದು ಭಾರತ ಮತ್ತು ಬಾಂಗ್ಲಾದೇಶದ ಕೆಲ ಪ್ರದೇಶಗಳಿಗೆ ತೊಂದರೆಯಾಗಬಹುದು ಎಂದು ವರದಿಗಳು ತಿಳಿಸಿವೆ.

ಈ ಯೋಜನೆಯು ಅಭೂತಪೂರ್ವವಾಗಿದೆ. ಆದರೆ, ಅಷ್ಟೇ ತಾಂತ್ರಿಕವಾಗಿ ಸವಾಲನ್ನೂ ಈ ಯೋಜನೆಯನ್ನು ಹೊಂದಿದೆ. ಇದು 40 - 50 ಕಿ.ಮೀ ಉದ್ದದ ಸುರಂಗಗಳ ಮೂಲಕ ಸುಮಾರು 2,000 ಮೀಟರ್ (2 ಕಿ.ಮೀ)ನಷ್ಟು ಭೂಮಿಯ ಆಳಕ್ಕೆ ಇಳಿಯುತ್ತದೆ ಎಂದು ಈ ವಿಷಯವನ್ನು ಅಧ್ಯಯನ ಮಾಡಿದ ಇಬ್ಬರು ವಿಜ್ಞಾನಿಗಳು 'ಈಟಿವಿ ಭಾರತ್‌'ಗೆ ತಿಳಿಸಿದ್ದಾರೆ.

ಈ ಎರಡೂ ಅಣೆಕಟ್ಟುಗಳ ನಿರ್ಮಾಣ ಸ್ಥಳವು ಮೆಟೊಕ್ ಕೌಂಟಿ(ಮೊಟುವೋ)ಯಲ್ಲಿ ಮತ್ತು ದಾದುವೊನಲ್ಲಿವೆ ಎಂದು ಗುರುತಿಸಲಾಗಿದೆ. ಇದು ಭಾರತದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಹಾಗೂ ಡಿಫಾಕ್ಟೊ ಗಡಿಯ ತೀರಾ ಹತ್ತಿರದಲ್ಲೇ ಇದೆ.

ಈ ಯೋಜನೆ ಕುರಿತು ಅಧ್ಯಯನ ಕೈಗೊಂಡ ಇಬ್ಬರು ವಿಜ್ಞಾನಿಗಳಾದ ಡಾ. ನಯನ್ ಶರ್ಮಾ ಮತ್ತು ಡಾ. ಧೀರಜ್ ಕುಮಾರ್ ಬರೆದ ಅಪ್ರಕಟಿತ ಲೇಖನವೊಂದರ ಪ್ರಕಾರ, ಎರಡೂ (ಮೋಟುವೊ ಮತ್ತು ದಾದುವೊ ಅಣೆಕಟ್ಟುಗಳು) ಮಾನವ ನಿರ್ಮಿತ ಶಾರ್ಟ್-ಕಟ್ ಸುರಂಗದ ಮೂಲಕ ನದಿಯಿಂದ ನೀರನ್ನು ಬೇರೆಡೆಗೆ ತಿರುಗಿಸುವುದನ್ನು ಒಳಗೊಂಡಿರುತ್ತದೆ. ಅದು ಹೆಚ್ಚಿನ ತಿರುವು (ಗ್ರೇಟ್​ ಬೆಂಡ್​)ಗಳನ್ನು ತಪ್ಪಿಸಿ, ನೇರವಾಗಿ ನೀರನ್ನು ಕಳುಹಿಸುತ್ತದೆ. ನದಿಯಿಂದ ಹರಿಯುವ ನೀರು 3,000 ಮೀಟರ್‌ಗಿಂತಲೂ ಕೆಳಗಿರುವ ಇಂಟರ್ಸೆಪ್ಟ್‌ ಪಾಯಿಂಟ್‌ಗಳಿಂದ ಬೃಹತ್ ಪ್ರಮಾಣದ ನೀರು ನೇರವಾಗಿ ಬೆಂಡ್‌ನ ಬದಿಯಲ್ಲಿರುವ ನದಿಯನ್ನು ಮತ್ತೆ ಸೇರಲು ಕೆಳಗೆ ನುಗ್ಗುತ್ತದೆ, ಅಲ್ಲಿ ಅದು ಕೇವಲ 850 ಮೀಟರ್ (ಮೋಟುಯೊ) ಅಥವಾ 560 ಮೀಟರ್ (ದಾದುವೊದಲ್ಲಿ) ಮಾತ್ರ, ಎಂದು ವಿವರಿಸಿದ್ದಾರೆ.

ವಿಶ್ವದ ಅತಿ ಎತ್ತರದ ಶಿಖರಗಳನ್ನು ಹೊಂದಿರುವ ಪರ್ವತ ಶ್ರೇಣಿಗಳಾದ ನಾಮ್ಚಾ ಬಾರ್ವಾ (7780 ಮೀಟರ್) ಮತ್ತು ಗಯಾಲಾ ಪೆರಿ (7293 ಮೀ) ಕೆಳಗೆ ಈ ಸುರಂಗಗಳನ್ನು ಅಗೆಯಲಾಗುವುದು, ಅದರ ಕೆಳಗೆ 180 ಡಿಗ್ರಿ ತಿರುವು ಮಾಡಲಾಗುತ್ತದೆ, ಇದನ್ನು ‘ಗ್ರೇಟ್ ಬೆಂಡ್’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ತ್ಸಾಂಗ್ಪೋವನ್ನು ಅಣೆಕಟ್ಟು ಮಾಡುವ ಚೀನಾದ ಯೋಜನೆಯು ಅಗಾಧ ಪ್ರಮಾಣದ್ದಾಗಿದೆ. ಇದು ಅಗ್ಗದ ಜಲಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಅಸ್ಸೋಂ, ಅರುಣಾಚಲ ಪ್ರದೇಶ ಮತ್ತು ಬಾಂಗ್ಲಾದೇಶದ ಕಡಿಮೆ ಪಕ್ವ ಪ್ರದೇಶಗಳಿಗೆ ಭಾರಿ ಅಪಾಯವನ್ನುಂಟು ಮಾಡುತ್ತದೆ ಎಂದು ಹಿರಿಯ ಪತ್ರಕರ್ತ ಸಂಜೀಬ್ ಕೆಆರ್ ಬರುವಾ ಬರೆಯುತ್ತಾರೆ.

ABOUT THE AUTHOR

...view details