ಕರ್ನಾಟಕ

karnataka

ETV Bharat / bharat

ಮೋದಿ ಜೀ, ಕೊರೊನಾ ಲಸಿಕೆ ನಮ್ಮ ದೇಶದ ಜನರಿಗೆ ಯಾವಾಗ ಸಿಗುತ್ತೆ?: ರಾಹುಲ್ ಗಾಂಧಿ ಪ್ರಶ್ನೆ

ವಿಶ್ವದ 23 ಲಕ್ಷ ಜನರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಚೀನಾ, ಅಮೆರಿಕ, ಇಂಗ್ಲೆಂಡ್​ ಹಾಗೂ ರಷ್ಯಾದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿವೆ. ಹಾಗಾಗಿ, ಭಾರತದ ಜನರಿಗೆ ಲಸಿಕೆ ಯಾವಾಗ ಸಿಗಲಿದೆ ಮೋದಿ ಜಿ? ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

Modi Rahul
ಮೋದಿ ರಾಹುಲ್

By

Published : Dec 23, 2020, 3:24 PM IST

ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದಲ್ಲಿ ಕೊರೊನಾ ವೈರಸ್ ಲಸಿಕೆ ಲಭ್ಯತೆ ವಿಷಯ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.

ವಿಶ್ವದ 23 ಲಕ್ಷ ಜನರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಚೀನಾ, ಅಮೆರಿಕ, ಇಂಗ್ಲೆಂಡ್​, ರಷ್ಯಾದಲ್ಲಿ ಲಸಿಕೆ ಪ್ರಾರಂಭವಾಗಿವೆ. ಭಾರತದ ಜನರಿಗೆ ಲಸಿಕೆ ಯಾವಾಗ ಸಿಗಲಿದೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಭಾರತ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಇನ್ನೂ ಚಾಲನೆ ನೀಡಿಲ್ಲ. ಆದರೆ, ಮುಂದಿನ ವಾರದಲ್ಲಿ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆಯನ್ನು ಸರ್ಕಾರ ಅನುಮೋದಿಸಬಹುದು ಎಂದು ವರದಿಗಳು ಹೇಳುತ್ತಿವೆ. ಲಸಿಕೆಯ ಸುರಕ್ಷತೆ ಸಾಬೀತಾದಾಗ ಮಾತ್ರ ಜನರಿಗೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಓದಿ:ದೇಶಾದ್ಯಂತ 24 ಗಂಟೆಯಲ್ಲಿ 23,950 ಹೊಸ ಪ್ರಕರಣಗಳು ಪತ್ತೆ

ABOUT THE AUTHOR

...view details