ಕರ್ನಾಟಕ

karnataka

ETV Bharat / bharat

ಕೊರೊನಾ ಮಹಾಮಾರಿಯ ಆರ್ಭಟ... ಆನ್​ಲೈನ್​​​​ ಆಹಾರದ ಮೊರೆ ಹೋದ ಚೀನಾ!

ಚೀನಾದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಎಲ್ಲರೂ ಆನ್​ಲೈನ್​​​​ ಆಹಾರದ ಮೊರೆ ಹೋಗಿದ್ದಾರೆ. ಇದರಿಂದಾಗಿ ಆಹಾರ ಸರಬರಾಜು ಮಾಡುವವರಿಗೆ ಬೇಡಿಕೆ ಹೆಚ್ಚಾಗಿದೆ.

China turns to internet for food supplies amid virus fears
ಆನ್​ಲೈನ್​ ಆಹಾರ ಪ್ಯಾಕಿಂಗ್​

By

Published : Feb 19, 2020, 11:44 PM IST

ಬೀಜಿಂಗ್​​ (ಚೀನಾ):ಚೀನಾದಲ್ಲಿಅಪಾಯಕಾರಿ ಕೊರೊನಾ ವೈರಸ್​ ಭೀತಿ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚೀನಾದಲ್ಲಿ ಮನೆ ಬಿಟ್ಟು ಯಾರೂ ಹೊರ ಬರಬಾರದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಹೀಗಾಗಿ ಎಲ್ಲರೂ ಆನ್​ಲೈನ್​​​​ ಆಹಾರದ ಮೊರೆ ಹೋಗಿದ್ದಾರೆ. ಇದರಿಂದಾಗಿ ಆಹಾರ ಸರಬರಾಜು ಮಾಡುವವರಿಗೆ ಬೇಡಿಕೆ ಹೆಚ್ಚಾಗಿದೆ. ಜನರು ಇ-ಕಾಮರ್ಸ್​​​ನಲ್ಲಿ ಆರ್ಡರ್​ ಮಾಡುವ​ ಆಹಾರವನ್ನು ಡೆಲಿವರಿ ಬಾಯ್​ಗಳು ಮನೆ ಮುಂದಿಟ್ಟು ಹೋಗಬೇಕು. ಆತ ಅಲ್ಲಿಂದ ತೆರಳಿದ ಬಳಿಕ ಗ್ರಾಹಕರು ಆರ್ಡರ್​​ ತೆಗೆದುಕೊಳ್ಳಬೇಕಿದೆ.

ಕೊರೊನಾ ನಿಯಂತ್ರಣಕ್ಕೆ ಕೆಲವು ಕಂಪನಿಗಳನ್ನು ಮುಚ್ಚಲಾಗಿದೆ. ಇ-ಕಾಮರ್ಸ್​, ರೆಸ್ಟೋರೆಂಟ್ಸ್​, ಚಿತ್ರಮಂದಿರಗಳು, ಕಚೇರಿಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಮತ್ತು ರಿಯಲ್​ ಎಸ್ಟೇಟ್​ ಕೂಡಾ ನಿಷೇಧಿಸಲಾಗಿದೆ.

ಆನ್​ಲೈನ್​ ಆಹಾರ ಪ್ಯಾಕಿಂಗ್​

ಮೊದಲು ಆನ್​ಲೈನ್​​ನಲ್ಲಿ ಆಹಾರ ಆರ್ಡರ್​ ಮಾಡಬೇಕು. ಆಹಾರವನ್ನು ಅತ್ಯಂತ ಸೂಕ್ಷ್ಮವಾಗಿ ಪ್ಯಾಕ್​ ಮಾಡಬೇಕಿದೆ. ಆರ್ಡರ್​ ಮಾಡಿದ ಆಹಾರ ತರುವಾಗ ಡೆಲಿವರಿ ಬಾಯ್​ ಮುಖಕ್ಕೆ ಮಾಸ್ಕ್​, ಚಳಿಗಾಲದಲ್ಲಿ ಹಾಕಿಕೊಳ್ಳುವ ಸ್ವೆಟರ್​​ಗಳನ್ನು ಧರಿಸಿರಬೇಕು. ಹಾಗೂ ಆಹಾರವನ್ನು ಗ್ರಾಹಕರ ಮನೆಯ ಮುಂಭಾಗ ಇಟ್ಟು ಹೋಗಬೇಕು. ಅದಾದ ಬಳಿಕ ಗ್ರಾಹಕರು ಆರ್ಡರ್​​ ಪಡೆದುಕೊಳ್ಳಬೇಕು. ಇದಕ್ಕೂ ಮೊದಲು ಆರ್ಡರ್ ಮಾಡಿದ ಆಹಾರವನ್ನು ಡೆಲಿವರಿ ಬಾಯ್​ ಮನೆಯ ಬಳಿ ಹೋಗಿ ಗ್ರಾಹಕರ ಕೈಗೆ ಕೊಡಲಾಗುತ್ತಿತ್ತು.

ABOUT THE AUTHOR

...view details