ನವದೆಹಲಿ:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಎತ್ತಿಹಿಡಿಯಲು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವ ಚೀನಾಗೆ ತಿರುಗೇಟು ನೀಡಿದ್ದು, ಜಾಗತಿಕ ಒಮ್ಮತಕ್ಕೆ ಬೀಜಿಂಗ್ ತಲೆದೂಗಬೇಕು, ಭವಿಷ್ಯದಲ್ಲಿ ಇಂತಹ ನಡೆಗಳಿಂದ ದೂರ ಇರಬೇಕು ಎಂದು ಎಚ್ಚರಿಕೆ ನೀಡಿದೆ.
ಚೀನಾದ ಸಹಾಯದೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವು ಪದೇ ಪದೆ ಕಾಶ್ಮೀರ ವಿವಾದವನ್ನು ಎತ್ತಿಹಿಡಿಯುತ್ತಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಇತರ ರಾಷ್ಟ್ರಗಳ 15 ಸದಸ್ಯರನ್ನೊಳಗೊಂಡ ಮಂಡಳಿಯು ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವೆಂದು ಅಭಿಪ್ರಾಯಪಟ್ಟಿದ್ದು, ಇತರ ದೇಶಗಳ ಸಹಾಯ ಪಡೆಯುವಲ್ಲಿ ಪಾಕಿಸ್ತಾನ ಮತ್ತೆ ವಿಫಲವಾಗಿದೆ.