ಬೀಜಿಂಗ್: ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್(ನಿವೃತ್ತ) ವಿ.ಕೆ. ಸಿಂಗ್ ಹೇಳಿದರು. ಈ ಹೇಳಿಕೆಯನ್ನು ಚೀನಾ ಸೋಮವಾರ ನಿರಾಕರಿಸಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದೆ.
ಲಡಾಖ್ ಲಡಾಯಿ: ತನ್ನ ಯೋಧರ ಸಾವು ನೋವುಗಳ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಿರಾಕರಣೆ - ಪಿಎಲ್‌ಎ ಸಾವು ನೋವುಗಳ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಿರಾಕರಣೆ
ಗಾಲ್ವನ್ ಘರ್ಷಣೆಯ ಸಂದರ್ಭದಲ್ಲಿ ಪಿಎಲ್‌ಎ ಸಾವು ನೋವುಗಳ ಬಗ್ಗೆ ಪ್ರತಿಕ್ರಿಯಿಸಲು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ನಿರಾಕರಿಸಿದ್ದಾರೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚೀನಾ ಮತ್ತು ಭಾರತ ಪರಸ್ಪರ ಮಾತುಕತೆ ನಡೆಸುತ್ತಿವೆ ಎಂದು ಪುನರುಚ್ಚರಿಸಿದರು.
ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಗಾಲ್ವನ್ ಕಣಿವೆಯಲ್ಲಿ ಜೂನ್. 15 ರಂದು ನಡೆದ ಘರ್ಷಣೆಯ ನಂತರ, ಚೀನಾ ತನ್ನ ಸೈನಿಕರ ಸಾವು ನೋವುಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಆದರೆ ಅಧಿಕೃತ ಮಾಧ್ಯಮ ಸಂಪಾದಕೀಯಗಳು ಚೀನಾ ಕೂಡ ಸಾವು ನೋವುಗಳನ್ನು ಅನುಭವಿಸಿವೆ ಎಂದು ಹೇಳಿವೆ.