ಕರ್ನಾಟಕ

karnataka

ETV Bharat / bharat

ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿನ ಸೇನೆ ಹಿಂತೆಗೆದುಕೊಳ್ಳುತ್ತಿರುವ ಚೀನಾ

ಮೂಲಗಳ ಪ್ರಕಾರ, ಚೀನಾ ತನ್ನ ತಾತ್ಕಾಲಿಕ ಮೂಲಸೌಕರ್ಯವನ್ನು ಹಿಂತೆಗೆದುಕೊಂಡಿದೆ ಮತ್ತು ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಮುಖಾಮುಖಿ ತಾಣಗಳಿಂದ ಕ್ರಮೇಣ ಸೈನ್ಯವನ್ನು ಹಿಂತೆಗೆದುಕೊಳ್ಳುವುದನ್ನು ಮುಂದುವರೆಸಿದೆ.

ಸೇನೆಯನ್ನು ಹಿಂತೆಗೆದುಕೊಳ್ಳುತ್ತಿರುವ ಚೀನಾ
ಸೇನೆಯನ್ನು ಹಿಂತೆಗೆದುಕೊಳ್ಳುತ್ತಿರುವ ಚೀನಾ

By

Published : Jul 8, 2020, 12:19 AM IST

ನವದೆಹಲಿ:ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಚೀನಾ ತನ್ನ ಸೈನ್ಯ ಮತ್ತು ತಾತ್ಕಾಲಿಕ ಮೂಲಸೌಕರ್ಯಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಎಂಟು ವಾರಗಳಿಂದ ಎರಡು ದೇಶದ ಸೈನ್ಯಗಳು ಅಲ್ಲಿ ನೆಲೆಯೂರಿದ್ದವು. ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ ಎರಡು ಘರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಎರಡು ದಿನಗಳಲ್ಲಿ ಚೀನಾ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವೆ ಭಾನುವಾರ ಸುಮಾರು ಎರಡು ಗಂಟೆಗಳ ದೂರವಾಣಿ ಸಂಭಾಷಣೆ ನಡೆದಿತ್ತು. ನಂತರ ಸೋಮವಾರ ಬೆಳಗ್ಗೆ ಚೀನಾ ಸೇನೆ ಹಿಂಪಡೆಯುವುದಾಗಿ ಹೇಳಿತ್ತು. ಗಡಿ ಮಾತುಕತೆಗೆ ದೋವಲ್ ಮತ್ತು ವಾಂಗ್ ವಿಶೇಷ ಪ್ರತಿನಿಧಿಗಳು.

ಸೇನೆಯನ್ನು ಹಿಂತೆಗೆದುಕೊಳ್ಳುತ್ತಿರುವ ಚೀನಾ

ಈ ಪ್ರದೇಶದಲ್ಲಿನ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆಯು ತನ್ನ ಕಾವಲುಗಾರರನ್ನು ಕಡಿಮೆ ಮಾಡುತ್ತಿಲ್ಲ ಮತ್ತು ಯಾವುದೇ ಸಂಭವನೀಯತೆಗಳನ್ನು ಎದುರಿಸಲು ಉನ್ನತ ಮಟ್ಟದ ಜಾಗರೂಕತೆಯನ್ನು ಮುಂದುವರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ವಾರದಲ್ಲಿ ಎರಡು ಸೈನ್ಯಗಳು ಹೆಚ್ಚಿನ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಜೂನ್. 30 ರಂದು ಕಾರ್ಪ್ಸ್ ಕಮಾಂಡರ್-ಮಟ್ಟದ ಮಾತುಕತೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪ್ರಕಾರ, ಎರಡೂ ಕಡೆಯವರು ಕನಿಷ್ಟ ಮೂರು ಕಿಲೋಮೀಟರ್ ಬಫರ್ ವಲಯವನ್ನು ರಚಿಸುತ್ತಾರೆ.

ABOUT THE AUTHOR

...view details