ವಾಷಿಂಗ್ಟನ್ (ಅಮೆರಿಕ): ಭಾರತ- ಚೀನಾ ಮಧ್ಯದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಗಡಿಯಲ್ಲಿ ನಡೆದ ಸಂಘರ್ಷಕ್ಕೆ ಚೀನಾದ ಹಿರಿಯ ಸೇನಾ ಮುಖಂಡರ ಕುಮ್ಮಕ್ಕು ಕಾರಣ ಎಂದು ಅಮೆರಿಕದ ಗುಪ್ತಚರ ಇಲಾಖೆ ಅಘಾತಕಾರಿ ಮಾಹಿತಿ ಬಿಡುಗಡೆ ಮಾಡಿದೆ.
ಪೂರ್ವ ಲಡಾಖ್ನ ಸಂಘರ್ಷಕ್ಕೆ ತಾನು ಕುಮ್ಮಕ್ಕು ನೀಡಿಲ್ಲ ಎಂದು ಚೀನಾ ರಕ್ಷಣಾ ಮುಖ್ಯಸ್ಥರು ಹೇಳಿದ ಬೆನ್ನಲ್ಲೇ ಅಮೆರಿಕದ ಗುಪ್ತಚರ ಇಲಾಖೆ ಈ ಮಾಹಿತಿ ಹೊರ ಹಾಕಿದೆ. ನಂಬಲಾರ್ಹ ಮೂಲಗಳಿಂದ ಚೀನಾದ ಪಶ್ಚಿಮ ಭಾಗದ ಕಮಾಂಡರ್ ಜನರಲ್ ಝಾವೋ ಝೋಂಕಿ ಸೇನಾ ಸಂಘರ್ಷಕ್ಕೆ ಕುಮ್ಮಕ್ಕು ನೀಡಿದ್ದು, ಚೀನಾ ಸರ್ಕಾರದ ಆದೇಶದಂತೆ ತನ್ನ ''ಭಾರತಕ್ಕೆ ಪಾಠ ಕಲಿಸುವ ನೀತಿ''ಯ ಅಂಗವಾಗಿ ಸಂಘರ್ಷಕ್ಕೆ ಆದೇಶ ಕಮಾಂಡರ್ ನೀಡಿದ್ದ ಎಂಬ ಮಾಹಿತಿಯನ್ನು ಅಮೆರಿಕ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.