ನವದೆಹಲಿ: ಚೀನಾ ಪ್ರಜಾಪ್ರಭುತ್ವವನ್ನು ಹೊಂದಿಲ್ಲ. ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಅವರಿಗೆ ಏನು ಅನಿಸುತ್ತೇ ಅದನ್ನ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ; ಸರ್ವ ಪಕ್ಷ ಸಭೆಯಲ್ಲಿ ದೀದಿ ಗುಡುಗು
ಪ್ರಧಾನಿ ಮೋದಿ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಡ್ರ್ಯಾಗನ್ ದೇಶದ ವಿರುದ್ಧ ಗುಡುಗಿದ್ದಾರೆ. ಚೀನಾ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಚೀನಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ; ಸರ್ವ ಪಕ್ಷ ಸಭೆಯಲ್ಲಿ ದೀದಿ ಗುಡುಗು
ಸರ್ವಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ನಾವು ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಭಾರತ ಗೆಲ್ಲುತ್ತೇ, ಚೀನಾ ಸೋಲುತ್ತದೆ. ಒಗ್ಗಟ್ಟಾಗಿ ಮಾತನಾಡಬೇಕು, ಒಗ್ಗಟ್ಟಾಗಿ ಯೋಚಿಸಬೇಕು ಹಾಗೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ದೀದಿ ಕರೆ ನೀಡಿದ್ದಾರೆ.
ಗಡಿ ಗಲಾಟೆ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರದ ಜೊತೆಗೆ ದೃಢವಾಗಿ ನಿಲ್ಲುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.