ಕರ್ನಾಟಕ

karnataka

ETV Bharat / bharat

'ಚೀನಾ ವೈರಸ್​' ಎಂದಿದ್ದಕ್ಕೆ ಚೀನಾ ರಾಯಭಾರ ಕಚೇರಿ ಗರಂ

ಏ.5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಕೊಟ್ಟಿದ್ದ ದೀಪ ಪ್ರಜ್ವಲನ ಸಮಯದಲ್ಲಿ ಬಿಜೆಪಿ ಎಂಎಲ್​ಎ ರಾಜಾ ಸಿಂಗ್​ 'ಚೀನಾ ವೈರಸ್ ಗೋ ಬ್ಯಾಕ್'​ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಚೀನಾ ರಾಯಭಾರ ಕಚೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

bjp mla raja singh
bjp mla raja singh

By

Published : Apr 11, 2020, 12:27 PM IST

ಹೊಸದಿಲ್ಲಿ: ಕೊರೊನಾ ವೈರಸ್ ಮೊದಲಿಗೆ ಕಂಡು ಬಂದಿದ್ದು ಚೀನಾದಲ್ಲಿ. ಹೀಗಾಗಿ ಅದನ್ನು ಚೀನಾ ವೈರಸ್​, ವುಹಾನ್ ವೈರಸ್​ ಎಂತಲೂ ಅನೇಕರು ಕರೆಯುತ್ತಾರೆ. ಹೀಗೆ ಕರೆಯುವ ಮೂಲಕ ಹಲವರು ಚೀನಾ ಮೇಲಿನ ಸಿಟ್ಟನ್ನೂ ತೀರಿಸಿಕೊಳ್ತಾರೆ. ಆದ್ರೆ ಚೀನಾ ವೈರಸ್​ ಎಂದರೆ ಚೀನಾಗೆ ಕೋಪ ಬರುವುದು ಮಾತ್ರ ಸತ್ಯ.

ಬಿಜೆಪಿ ಎಂಎಲ್​ಎ ಒಬ್ಬರು ಇತ್ತೀಚೆಗೆ ಚೀನಾ ವೈರಸ್​ ಗೋ ಬ್ಯಾಕ್ ಎಂದಿದ್ದಕ್ಕೆ ಚೀನಾ ಕಣ್ಣು ಕೆಂಪಗಾಗಿವೆ. ಏ.5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಕೊಟ್ಟಿದ್ದ ದೀಪ ಪ್ರಜ್ವಲನ ಸಮಯದಲ್ಲಿ ಬಿಜೆಪಿ ಎಂಎಲ್​ಎ ರಾಜಾ ಸಿಂಗ್​ ಚೀನಾ ವೈರಸ್ ಗೋ ಬ್ಯಾಕ್​ ಎಂದು ಬಹಿರಂಗವಾಗಿಯೇ ಘೋಷಣೆ ಕೂಗಿದ್ದರು. ಇದರಿಂದ ಕೆಂಡಾಮಂಡಲವಾಗಿರುವ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಎಂಎಲ್​ಎ ರಾಜಾ ಸಿಂಗ್​ಗೆ ಪತ್ರ ಬರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

"ಕೊರೊನಾ ವೈರಸ್​ ಬಗ್ಗೆ ಮೊಟ್ಟ ಮೊದಲು ಜಗತ್ತಿಗೆ ಮಾಹಿತಿ ನೀಡಿದ್ದೇ ಚೀನಾ. ಹಾಗಂತ ಅದು ಚೀನಾದಲ್ಲಿ ಹುಟ್ಟಿತ್ತು ಎಂದರ್ಥವಲ್ಲ" ಎಂದು ಪತ್ರದಲ್ಲಿ ತಿಳಿಸಿರುವ ಚೀನಾ ರಾಯಭಾರಿ ಲಿಯು ಬಿಂಗ್​, ಚೀನಾ ವೈರಸ್​ ಎಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷರೇ ಕೊರೊನಾ ವೈರಸ್​ಗೆ ಚೀನಾ ವೈರಸ್​ ಎಂದಿದ್ದಾರೆ. ಹಾಗಿರುವಾಗ ನಾನು ಅಂದಿದ್ರಲ್ಲಿ ತಪ್ಪೇನು ಎಂದು ರಾಜಾ ಸಿಂಗ್​ ಪ್ರಶ್ನಿಸಿದ್ದಾರೆ.

ABOUT THE AUTHOR

...view details