ಕರ್ನಾಟಕ

karnataka

ETV Bharat / bharat

ಚೀನಾ ಎಲ್‌ಎಸಿ ದಾಟಿ ಪ್ರಚೋದನೆ ನೀಡಿದೆ:  ಸುಬ್ರಮಣಿಯನ್ ಸ್ವಾಮಿ ಕಿಡಿಕಿಡಿ - ಚೀನಾ ಆಕ್ರಮಿಸಿಕೊಂಡ ಭೂಮಿ

ಹೆಚ್ಚಿನ ಭಾರತೀಯರು ದೇಶಕ್ಕಾಗಿ ಹೋರಾಡಬೇಕು ಎಂದು ಬಯಸಿದ್ದರಿಂದ ಭಾರತವು ಚೀನಾ ಆಕ್ರಮಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಬೇಕು ಎಂದು ಸ್ವಾಮಿ ಸರ್ಕಾರವನ್ನ ಒತ್ತಾಯಿಸಿದ್ದಾರೆ.

swamy
swamy

By

Published : Jun 19, 2020, 1:12 PM IST

ನವ ದೆಹಲಿ:ಚೀನಾವೇ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಿದೆ ಮತ್ತು ಪೂರ್ವದಲ್ಲಿ ನಡೆಯುತ್ತಿರುವ ಘರ್ಷಣೆಗೆ ಪ್ರಚೋದನೆ ನೀಡಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಹೆಚ್ಚಿನ ಭಾರತೀಯರು ದೇಶಕ್ಕಾಗಿ ಹೋರಾಡಬೇಕೆಂದು ಬಯಸಿದ್ದರಿಂದ ಭಾರತವು ಚೀನಾ ಆಕ್ರಮಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಬೇಕು ಎಂದು ಸ್ವಾಮಿ ಹೇಳಿದ್ದಾರೆ.

"ನನ್ನ ಪಕ್ಷದಲ್ಲಿನ ಮನಸ್ಥಿತಿ ನನಗೆ ತಿಳಿದಿದೆ. ನಾವು ಯಾವ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಕೂಡಾ ತಿಳಿದಿದ್ದೇನೆ. ಹೀಗಾಗಿ ಏನೇ ಆದರೂ ಆ ಭೂಮಿಯನ್ನು ಪುನಃ ಪಡೆದುಕೊಳ್ಳಬೇಕು" ಎಂದು ಅವರು ಪ್ರತಿಪಾದಿಸಿದ್ದಾರೆ.

"ಚೀನಿಯರು ಹಿಂದೆ ಸರಿಯುವುದಿಲ್ಲ, ಭಾರತೀಯ ಜನರು ಸಹಿಸುವುದಿಲ್ಲ. ಆದ್ದರಿಂದ ನಾವು ಯುದ್ಧಕ್ಕೆ ಹೋಗಬೇಕಾಗುತ್ತದೆ. ಬಹುಶಃ ಸ್ಥಳೀಯ ಯುದ್ಧವಾಗಬಹುದು" ಎಂದು ಸ್ವಾಮಿ ಹೇಳಿದ್ದಾರೆ.

ABOUT THE AUTHOR

...view details