ಬೀಜಿಂಗ್: ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ದಾರಿ ತಪ್ಪಿದ ಮತ್ತು ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ತನ್ನ ಯೋಧನನ್ನು ತಕ್ಷಣ ವಾಪಸ್ ಕಳುಹಿಸಿಕೊಡಿ ಎಂದು ಚೀನಾ ಶನಿವಾರದಂದು ಮನವಿ ಮಾಡಿದೆ. ಲೈನ್ ಆಫ್ ಕಂಟ್ರೋಲ್ನ ಭಾರತೀಯ ಗಡಿ ಪ್ರದೇಶ ಲಡಾಕ್ನಲ್ಲಿ ಚೀನಾ ಯೋಧನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿತ್ತು.
ಭಾರತೀಯ ಸೇನೆ ವಶಕ್ಕೆ ಪಡೆದ ತನ್ನ ಯೋಧನನ್ನು ಕಳುಹಿಸಿಕೊಡುವಂತೆ ಚೀನಾ ಮನವಿ
ಚೀನಾ ಮಿಲಿಟರಿಯು ತನ್ನ ಯೋಧರೊಬ್ಬರು ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ದಾರಿ ತಪ್ಪಿ ಭಾರತಕ್ಕೆ ಬಂದಿರುವುದಾಗಿ ದೃಢಪಡಿಸಿದೆ. ಹಾಗಾಗಿ ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ತನ್ನ ಯೋಧನನ್ನು ತಕ್ಷಣ ಕಳುಹಿಸಿಕೊಡಿ ಎಂದು ಕೇಳಿಕೊಂಡಿದೆ.
ಭಾರತೀಯ ಸೇನೆ ವಶಕ್ಕೆ ಪಡೆದ ತನ್ನ ಸೈನಿಕನ್ನು ಕಳುಹಿಸಿಕೊಡುವಂತೆ ಚೀನಾ ಕರೆ
ಈ ಸುದ್ದಿಯನ್ನೂ ಓದಿ:ಲಡಾಖ್ನಲ್ಲಿ ಚೀನಾ ಯೋಧನ ವಶಕ್ಕೆ ಪಡೆದ ಭಾರತೀಯ ಸೇನೆ.. ಮರಳಿ ಕಳುಹಿಸಲು ನಿರ್ಧಾರ
ಇದೀಗ ಚೀನಾ ಮಿಲಿಟರಿಯು ತನ್ನ ಯೋಧರೊಬ್ಬರು ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ದಾರಿ ತಪ್ಪಿ ಭಾರತಕ್ಕೆ ಬಂದಿರುವುದಾಗಿ ದೃಢಪಡಿಸಿದೆ. ಹಾಗಾಗಿ ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ತನ್ನ ಯೋಧನನ್ನು ತಕ್ಷಣ ಹಿಂದಿರುಗಿಸಬೇಕೆಂದು ಕೇಳಿಕೊಂಡಿದೆ.