ನವದೆಹಲಿ: ಇಡೀ ಜಗತ್ತನ್ನು ಕೊರೊನಾ ವೈರಸ್ ತೆಕ್ಕೆಗೆ ತಳ್ಳಿದ ಚೀನಾ ಇದೀಗ ಭಾರತವು ಔಷಧಿಗಳಲ್ಲಿ ಸ್ವಾವಲಂಬಿಯಾಗುವುದನ್ನು ತಡೆಯಲು ತೀವ್ರ ಪ್ರಯತ್ನ ಮಾಡುತ್ತಿದೆ. ಔಷಧಿಗಳಲ್ಲಿ ಬಳಸುವ ಕಚ್ಚಾ ವಸ್ತುಗಳನ್ನು ಕಡಿಮೆ ಬೆಲೆಗೆ ಭಾರತಕ್ಕೆ ರಫ್ತು ಮಾಡಲು ಚೀನಾ ಪ್ರಾರಂಭಿಸಿದೆ.
ಔಷಧ ಕೈಗಾರಿಕೆಗಳಿಗೆ ಕಡಿಮೆ ಬೆಲೆಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿರುವ ಚೀನಾ... ಭಾರತದ ಸ್ವಾವಲಂಬನೆಗೆ ಅಡ್ಡಗಾಲು! - ಕಚ್ಚಾ ವಸ್ತು
ಭಾರತವು ಔಷಧಿಗಳಲ್ಲಿ ಸ್ವಾವಲಂಬಿಯಾಗುವುದನ್ನು ತಡೆಯಲು ಚೀನಾ ತೀವ್ರ ಪ್ರಯತ್ನ ಮಾಡುತ್ತಿದೆ. ಔಷಧಿಗಳಲ್ಲಿ ಬಳಸುವ ಕಚ್ಚಾ ವಸ್ತುಗಳನ್ನು ಕಡಿಮೆ ಬೆಲೆಗೆ ಭಾರತಕ್ಕೆ ರಫ್ತು ಮಾಡಲು ಚೀನಾ ಪ್ರಾರಂಭಿಸಿದೆ.
ಕೊರೊನಾ ವೈರಸ್ ಹುಟ್ಟಿದ ವುಹಾನ್ನಲ್ಲಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಭಾರತ ಮತ್ತು ಅಮೆರಿಕ ಸೇರಿದಂತೆ ಇತರ ದೇಶಗಳು ಇನ್ನೂ ಕೂಡಾ ಕೊರೊನಾ ಹಿಡಿತದಲ್ಲಿವೆ. ಪ್ರಪಂಚದಾದ್ಯಂತ ಚೀನಾ ಬಗ್ಗೆ ಕೋಪವಿದೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಹಲವು ದೇಶಗಳು ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಆದರೆ ಖರೀದಿದಾರರು ಇತರ ದೇಶಗಳ ಕಡೆಗೆ ತಿರುಗುವುದನ್ನು ತಡೆಯಲು ಚೀನಾ ಪ್ರಯತ್ನಿಸುತ್ತಿದೆ.
ಕಡಿಮೆ ಬೆಲೆಯ ಉತ್ಪನ್ನಗಳಿಂದಾಗಿ ಚೀನಾ ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ಈ ಹಿಂದೆಯೇ ಪ್ರಯತ್ನಿಸಿತ್ತು. ಇದೀಗ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಸ್ವಾವಲಂಬಿಯಾಗುವುದನ್ನು ತಡೆಯಲು ಚೀನಾ ತನ್ನ ಉತ್ಪನ್ನಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಭಾರತೀಯ ಉದ್ಯಮಿಗಳು ಉತ್ಪಾದನೆಯಲ್ಲಿ ತೊಡಗಲು ಹಿಂಜರಿಯುವಂತೆ ಪ್ರೇರೇಪಿಸುತ್ತಿದೆ.