ಕರ್ನಾಟಕ

karnataka

ETV Bharat / bharat

ಬೈಸಿಕಲ್​ಗೆಂದು ಕೂಡಿಟ್ಟ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ಮಕ್ಕಳು - piggy bank saving

ಈ ಇಬ್ಬರು ಮಕ್ಕಳು ತಾವು ಕೂಡಿಟ್ಟ 5,000 ರೂ.ಹುಂಡಿ ಹಣದಲ್ಲಿ ಬೈಸಿಕಲ್ ಖರೀದಿಸಲು ಯೋಜಿಸಿದ್ದರು. ಆದರೆ ಈಗ ಅವರು ತಮ್ಮ ಪೋಷಕರೇ ಅಚ್ಚರಿಗೊಳ್ಳುವಂತೆ ಆ ಹಣವನ್ನು ಪ್ರಧಾನ ಮಂತ್ರಿಯ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.

piggy bank saving
ಪಿಗ್ಗಿ ಬ್ಯಾಂಕ್​ ಉಳಿತಾಯ ಮಾಡಿರುವ ಮಕ್ಕಳು

By

Published : Apr 9, 2020, 3:50 PM IST

ಭಾವನಗರ(ಗುಜರಾತ್​): ಅನೇಕ ಬಾರಿ ಮಕ್ಕಳು ತಮ್ಮ ಕೆಲ ನಿರ್ಧಾರಗಳಿಂದ ಹಿರಿಯರಿಗೆ ಮಾದರಿಯಾಗುತ್ತಾರೆ. ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್​ ಉಳಿತಾಯವನ್ನು ವೈರಸ್ ವಿರೋಧಿ ಅಭಿಯಾನಕ್ಕಾಗಿ ದೇಣಿಗೆ ನೀಡಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರ ಮೂಲದ ಮಹೇಶ್‌ಭಾಯ್ ಪಾಂಡೆ ಗುಜರಾತ್​ನ ಭಾವನಗರದ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕಳೆದ ನಾಲ್ಕು ತಲೆಮಾರುಗಳಿಂದ ಗುಜರಾತ್‌ನಲ್ಲಿ ವಾಸಿಸುತ್ತಿರುವ ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗ ರುದ್ರ ಐದನೇ ತರಗತಿಯಲ್ಲಿ ಓದುತ್ತಿದ್ದರೆ, ಮಗಳು ಶ್ರೀ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಪಿಗ್ಗಿ ಬ್ಯಾಂಕ್​ ಉಳಿತಾಯ ಮಾಡಿರುವ ಮಕ್ಕಳು

ಈ ಇಬ್ಬರು ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕಿ(ಮಕ್ಕಳು ಕೂಡಿಟ್ಟ ಹುಂಡಿ ಹಣ)ನಲ್ಲಿ 5,555 ರೂ.ಗಳನ್ನು ಉಳಿಸಿದ್ದರು. ಅಲ್ಲದೆ ಆ ಹಣದಲ್ಲಿ ಬೈಸಿಕಲ್ ಖರೀದಿಸಲು ಯೋಜಿಸಿದ್ದರು. ಆದರೆ ಈಗ ಅವರು ಪೋಷಕರನ್ನೇ ಅಚ್ಚರಿಗೊಳಿಸುವ ಮೂಲಕ 5,555 ರೂ.ಗಳ ಚೆಕ್ ಅನ್ನು ಪ್ರಧಾನ ಮಂತ್ರಿಯ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.

ಮಕ್ಕಳು ಕಳಿಸಿದ ಚೆಕ್​

ಈ ಇಬ್ಬರು ಮಕ್ಕಳು ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಆಗಾಗ್ಗೆ ಕೈ ತೊಳೆಯುವುದರ ಮಹತ್ವವನ್ನು ವಿವರಿಸುವ ವೀಡಿಯೊವನ್ನು ತಯಾರಿಸಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ತಂದೆ ಕೂಡಾ ತಮ್ಮ ಸ್ಮಾರ್ಟ್ ಫೋನ್ ಮೂಲಕ ವೀಡಿಯೊವನ್ನು ತಮ್ಮ ಕಾಂಟ್ಯಾಕ್ಟ್​ಗಳಿಗೆ ಕಳಿಸಿದ್ದಾರೆ.

ABOUT THE AUTHOR

...view details