ಜೈಪುರ,(ರಾಜಸ್ತಾನ್):ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳ ಸಾವಿನ ಪ್ರಮಾಣ ಮುಂದುವರೆಯುತ್ತಲೇ ಇದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ರಾಜಸ್ತಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮಂಗಳವಾರ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಪೈಲಟ್, ರಾಜ್ಯ ಸರ್ಕಾರ ಈವರೆಗೂ ಕೈಗೊಂಡಿರುವ ಕ್ರಮಗಳು ಪರಿಣಾಮಕಾರಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿಯೇ ಕೆಲ ತೊಂದರೆಗಳಿವೆ. ಹಾಗಾಗಿ ಹಲವೆಡೆ ಮಕ್ಕಳ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದಿದ್ದಾರೆ.
ಇದು ಒಬ್ಬ ವ್ಯಕ್ತಿ ಅಥವಾ ಒಬ್ಬ ನಾಯಕನಿಗೆ ಸಂಬಂಧಿಸಿದ ವಿಷಯವಲ್ಲ. ಏನಾಗುತ್ತಿದೆ ಎಂಬುದನ್ನು ನಾವು ಮೊದಲು ಕಂಡು ಹಿಡಿಯಬೇಕಿದೆ. ಆ ಮೇಲೆ ಈ ಸಮಸ್ಯೆ ಪರಿಹರಿಸಬೇಕು. ಇದು ಮತ್ತೆ ಮತ್ತೆ ಮರುಕಳಿಸುವುದಿಲ್ಲ ಎಂಬ ಭಾವನೆಯನ್ನ ರಾಜ್ಯದ ಜನರಲ್ಲಿ ಮೂಡಿಸಬೇಕಿದೆ. ಆದರೆ, ಬೇಗ ಆ ಕಾರ್ಯ ನಡೆಯುತ್ತೆ ಅಂತಾ ಡಿಸಿಎಂ ಸಚಿನ್ ಪೈಲಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಟಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಶಿಶುಗಳ ಸಾವಿನ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಇದರ ಹೊಣೆಗಾರಿಕೆಯನ್ನು ಆ ಆಸ್ಪತ್ರೆಯವರೇ ಹೊತ್ತುಕೊಂಡು. ಆದಷ್ಟು ಬೇಗ ಸಾವಿನ ಪ್ರಮಾಣ ನಿಯಂತ್ರಿಸಬೇಕ ಅಂತಾ ಸೂಚಿಸಿದ್ದಾರೆ.