ನ್ಯೂಯಾರ್ಕ್:ಕೋವಿಡ್-19 ಬಿಕ್ಕಟ್ಟಿನಿಂದ ಚಿಕ್ಕ ಮಕ್ಕಳೇ ಅತಿ ಹೆಚ್ಚು ಬಾಧಿತರಾಗುತ್ತಿದ್ದು, ಇವರ ಭವಿಷ್ಯದ ವಿಷಯವನ್ನು ಪ್ರಾಮುಖ್ಯತೆಗಳ ಪಟ್ಟಿಯಿಂದ ಹೊರಗಿಡುವಂತಿಲ್ಲ ಎಂದು ಯುನಿಸೆಫ್ ಹೇಳಿದೆ. ಮಕ್ಕಳ ಮೇಲೆ ಕೋವಿಡ್-19 ಬಿಕ್ಕಟ್ಟಿನಿಂದಾಗಬಹುದಾದ ಪರಿಣಾಮಗಳನ್ನು ತಡೆಯಲು ಕ್ರಮ ಕೈಗೊಳ್ಳದಿದ್ದಲ್ಲಿ ಅವರ ಭವಿಷ್ಯವನ್ನು ಶಾಶ್ವತವಾಗಿ ಹಾಳು ಮಾಡಿದಂತಾಗುತ್ತದೆ ಎಂದು ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ರಿಯೆಟ್ಟಾ ಫೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಭವಿಷ್ಯ ಕಾಪಾಡುವುದು ಅಗತ್ಯ; ಯುನಿಸೆಫ್ ಕರೆ
ಯುನಿಸೆಫ್ ಅಧ್ಯಯನದ ಪ್ರಕಾರ ವಿಶ್ವಾದ್ಯಂತ 18 ವರ್ಷಕ್ಕೂ ಕೆಳಗಿನ ಶೇ.99 ರಷ್ಟು ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ಲಾಕ್ಡೌನ್ ವಿಧಿಸಲಾಗಿರುವ 186 ದೇಶಗಳ ಪೈಕಿ ಒಂದರಲ್ಲಿ ವಾಸಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ಮಗುವಿನ ಪ್ರಾಣ ಉಳಿಸುವುದು ಹಾಗೂ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಯುನಿಸೆಫ್ ಕರೆ ನೀಡಿದೆ.
ಚಿಕ್ಕಮಕ್ಕಳು ಮಾತ್ರವಲ್ಲದೇ ಕೊರೊನಾ ಸೋಂಕು ತಗಲುವ ಪ್ರೌಢವಯಸ್ಕರು ಸಹ ಅತಿ ಹೆಚ್ಚು ಬಾಧಿತರಾಗಲಿದ್ದಾರೆ. ಯುನಿಸೆಫ್ ಅಧ್ಯಯನದ ಪ್ರಕಾರ, ವಿಶ್ವಾದ್ಯಂತ 18 ವರ್ಷ ಕೆಳಗಿನ ಶೇ.99 ರಷ್ಟು ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ಲಾಕ್ಡೌನ್ ವಿಧಿಸಲಾಗಿರುವ 186 ದೇಶಗಳ ಪೈಕಿ ಒಂದರಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ ವಿಶ್ವದ ಒಟ್ಟು ಶೇ.62 ರಷ್ಟು ಮಕ್ಕಳು ಭಾಗಶಃ ಅಥವಾ ಸಂಪೂರ್ಣ ಲಾಕ್ಡೌನ್ ಆಗಿರುವ 82 ದೇಶಗಳ ಪೈಕಿ ಒಂದರಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
"ಯಾವುದೇ ಸಾಂಕ್ರಾಮಿಕ ರೋಗದ ಸಂಕಷ್ಟ ಎದುರಾದಾಗ ಮಕ್ಕಳಿಗೆ ಅದರಿಂದ ಹೆಚ್ಚಿನ ಸಮಸ್ಯೆಯಾಗುತ್ತದೆ. ಹೀಗಾಗಿ ಪ್ರತಿ ಮಗುವಿನ ಪ್ರಾಣ ಉಳಿಸುವುದು ಹಾಗೂ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ." ಎಂದು ಹೆನ್ರಿಯೆಟ್ಟಾ ಫೋರೆ ಹೇಳಿದ್ದಾರೆ.