ಸಂಭಾಲ್ (ಉತ್ತರಪ್ರದೇಶ): ಸ್ವಾತಂತ್ರ್ಯೋತ್ಸವ ದಿನದಂದೇ ಇಲ್ಲಿನ 16 ವರ್ಷದ ಬಾಲಕಿ ಪ್ರಧಾನಿಗೆ 18 ಪುಟಗಳ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಪತ್ರದಲ್ಲಿ ದೇಶದ ಸಮಸ್ಯೆಗಳಾದ ಭ್ರಷ್ಟಾಚಾರ, ಅರಣ್ಯ ನಾಶ, ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳ ಕುರಿತಂತೆ ಪತ್ರದಲ್ಲಿ ವಿವರಿಸಲಾಗಿದ್ದು, ಈ ಎಲ್ಲ ವಿಚಾರಗಳು ನನ್ನ ಸಾವಿಗೆ ಕಾರಣವಾಗಿದೆ ಎಂದೂ ಬರೆಯಲಾಗಿತ್ತು.
ಜ್ವಲಂತ ಸಮಸ್ಯೆಗಳ ಪರ ದನಿ ಎತ್ತಿ ಪತ್ರ ಬರೆದಿಟ್ಟು ಬಾಲಕಿ ಆತ್ಮಹತ್ಯೆ: ಪ್ರಧಾನಿ ಕಚೇರಿಗೆ ಪತ್ರ ರವಾನೆ - ಉತ್ತರಪ್ರದೇಶ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಆತ್ಮಹತ್ಯೆಗೆ ಬಲಿಯಾಗಿದ್ದ 16 ವರ್ಷದ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ವಿವಿಧ ವಿಷಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಭಾರತವನ್ನು ಕಾಡುತ್ತಿರುವ ಸಮಸ್ಯೆಗಳು ನನ್ನ ಆತ್ಮಹತ್ಯೆಗೆ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಳು.
ಜ್ವಲಂತ ಸಮಸ್ಯೆಗಳ ಪರ ದನಿ ಎತ್ತಿ ಪತ್ರ ಬರೆದಿಟ್ಟು ಬಾಲಕಿ ಆತ್ಮಹತ್ಯೆ: ಪ್ರಧಾನಿ ಕಚೇರಿಗೆ ಪತ್ರ ರವಾನೆ
ಇದೀಗ 10ನೇ ತರಗತಿ ಬಾಲಕಿ ಬರೆದಿರುವ ಈ ಪತ್ರವನ್ನು ಉತ್ತರಪ್ರದೇಶ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಧಾನಿ ಮೋದಿಗೆ ಕಳುಹಿಸಿದ್ದು, ಈ ಕುರಿತಂತೆ ಮನ್ - ಕಿ- ಬಾತ್ನಲ್ಲಿ ಚರ್ಚೆ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ವಿಶೇಷ್ ಗುಪ್ತಾ, ‘ಬಾಲಕಿ ಬರೆದಿರುವ ಪತ್ರವನ್ನು ಪ್ರಧಾನಮಂತ್ರಿಯ ಕಚೇರಿಗೆ ಕಳುಹಿಸಲಾಗಿದೆ. ಈ ಕುರಿತು ಪ್ರಸ್ತಾಪಿಸುವಂತೆ ಪತ್ರದಲ್ಲಿಯೂ ತಿಳಿಸಲಾಗಿದೆ. ಅಲ್ಲದೇ ಬಾಲಕಿಯ ಪತ್ರದ ಪ್ರತಿಯನ್ನೂ ಅವರಿಗೆ ಕಳುಹಿಸಲಾಗಿದೆ’ ಎಂದಿದ್ದಾರೆ.