ಕರ್ನಾಟಕ

karnataka

ETV Bharat / bharat

ಸ್ವೀಟ್​ ಕೊಡಿಸೋದಾಗಿ 8 ವರ್ಷದ ಬಾಲಕಿ ಕರೆದೊಯ್ದ 14ರ ಬಾಲಕನಿಂದ ಅತ್ಯಾಚಾರ - ಪೋಕ್ಸೋ ಕಾಯ್ದೆ

ಗ್ರೇಟರ್​ ನೊಯ್ಡಾದ ದಂಕೌರ್ ಪ್ರದೇಶದಲ್ಲಿ 8 ವರ್ಷದ ಬಾಲಕಿಯ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಆರೋಪಿ ಬಾಲಕನನ್ನು ಬಂಧಿಸಿ ಬಾಲಾಪರಾಧ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Child raped by teenager
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

By

Published : Apr 15, 2020, 12:15 PM IST

ನೊಯ್ಡಾ(ಉತ್ತರಪ್ರದೇಶ):ಸಿಹಿ ತಿನಿಸು ಕೊಡಿಸುವುದಾಗಿ ಕರೆದುಕೊಂಡು ಹೋಗಿ 8 ವರ್ಷದ ಬಾಲಕಿಯ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಗ್ರೇಟರ್​ ನೊಯ್ಡಾದ ದಂಕೌರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಬಾಲಕನನ್ನು ಬಂಧಿಸಿ ಬಾಲಾಪರಾಧ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

" ಅತ್ಯಾಚಾರಕ್ಕೊಳಗಾದ ಬಾಲಕಿ ಹಾಗೂ ಅರೋಪಿ ಬಾಲಕ ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಅವರು ಆಗಾಗ್ಗೆ ಒಟ್ಟಿಗೆ ಆಟ ಆಡುತ್ತಿದ್ದರೆಂದು ತಿಳಿದು ಬಂದಿದೆ. ಅವರಿಬ್ಬರ ಕುಟುಂಬದವರಿಗೂ ಕೂಡ ಪರಿಚಯಸ್ಥರಾಗಿದ್ದು, ಸೋಮವಾರ ಆರೋಪಿ ಬಾಲಕಿಯ ತಾಯಿಗೆ ಸಿಹಿ ತಿನಿಸು ತರುವುದಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

" ನಂತರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.ಈ ಘಟನೆ ಬೆಳಕಿಗೆ ಬಂದ ನಂತರ ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದು, ಬಾಲಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಿ ಬಾಲಕನ ವಿರುದ್ಧ ಐಪಿಸಿ ಸೆಕ್ಷನ್​ 376(ಅತ್ಯಾಚಾರ), 342(ಅಕ್ರಮ ಬಂಧನ) ಹಾಗೂ ಪೋಕ್ಸೋ ಕಾಯ್ದೆಯಡಿ ಎಫ್​ಐಆರ್​ ದಾಖಲಾಗಿದೆ.

ABOUT THE AUTHOR

...view details