ತಿಕಮಘರ್ (ಮಧ್ಯಪ್ರದೇಶ): ಆಯುಷ್ಯ ಗಟ್ಟಿ ಇದ್ರೆ ಸಾವನ್ನೂ ಗೆಲ್ಲಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ ಎನ್ನಬಹುದು. ಕಟ್ಟಡವೊಂದರ 2ನೇ ಮಹಡಿಯಿಂದ ಕೆಳಗೆ ಬಿದ್ದ ಮಗು ಅದೃಷ್ಟವಶಾತ್ ಅದೇ ಮಾರ್ಗವಾಗಿ ಬರುತ್ತಿದ್ದ ಸೈಕಲ್ ಆಟೋ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದೆ.
ಕಟ್ಟಡದ 2ನೇ ಮಹಡಿಯಿಂದ ಕೆಳಗೆ ಬಿದ್ದ ಮಗು... ಮುಂದಾಗಿದ್ದು ಪವಾಡ! ವಿಡಿಯೋ ನೋಡಿ - Auto rikshaw saved Child in Tikamgarh
ಕಟ್ಟಡವೊಂದರ 2ನೇ ಮಹಡಿಯಿಂದ ಕೆಳಗೆ ಬಿದ್ದ ಮಗು ಅದೃಷ್ಟವಶಾತ್ ಅದೇ ಮಾರ್ಗವಾಗಿ ಬರುತ್ತಿದ್ದ ಸೈಕಲ್ ಆಟೋ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದೆ.
2 ನೇ ಮಹಡಿಯಿಂದ ಕೆಳಗೆ ಬಿದ್ದ ಮಗು
ಮಧ್ಯಪ್ರದೇಶದ ತಿಕಮಘರ್ನಲ್ಲಿ ಮೂರು ವರ್ಷದ ಬಾಲಕ ಮನೆಯ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಸರಿಯಾದ ಸಮಯಕ್ಕೆ ಅದೇ ಮಾರ್ಗವಾಗಿ ಬರುತ್ತಿದ್ದ ಸೈಕಲ್ ಆಟೋವೊಂದರ ಸೀಟ್ ಮೇಲೆ ಬಿದ್ದು ಪವಾಡಸದೃಶವೆಂಬಂತೆ ಸಾವನ್ನೇ ಗೆದ್ದಿದ್ದಾನೆ.
ಈ ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ನೋಡುಗರನ್ನು ಚಕಿತಗೊಳಿಸುತ್ತದೆ.