ಮಂಚಿರ್ಯಾಲ: ಮಹಾಮಾರಿ ರೋಗಕ್ಕೆ ಒಂದೇ ಕುಟುಂಬದಲ್ಲಿ ನಾಲ್ವರು ಬಲಿಯಾಗಿದ್ದರು. ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದರು. ಆ ಮಗುವೂ ಸಹ ಮಹಾಮಾರಿ ರೋಗದಿಂದ ಬಳಲುತ್ತಿತ್ತು. ಈಗ ವೈದ್ಯರೊಬ್ಬರ ಪರಿಶ್ರಮದಿಂದ ಆ ಮಗು ಮಹಾಮಾರಿ ವಿರುದ್ಧ ಹೋರಾಡಿ ಗೆದ್ದು ಬಂದಿದೆ.
ಹೌದು, ತೆಲಂಗಾಣದ ಮಂಚಿರ‍್ಯಾಲದ ಶ್ರೀಶ್ರೀನಗರದ ನಿವಾಸಿ ಗುಡಿಮಲ್ಲ ರಾಜಗಟ್ಟು (30) ಖಾಸಗಿ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಮಹಾಮಾರಿ ಡೆಂಘಿ ರೋಗಕ್ಕೆ ರಾಜುಗಟ್ಟು, ಆತನ ತಾತ ಲಿಂಗಯ್ಯ (70) ಮತ್ತು ಆತನ ಮಗಳು ಶ್ರೀ ವರ್ಷಿಣಿ (6) ಬಲಿಯಾಗಿದ್ದರು. ಇಷ್ಟೇ ಅಲ್ಲದೇ ರಾಜುಗಟ್ಟು ಪತ್ನಿ ಸೋನಿ ಮಗುವಿಗೆ ಜನ್ಮ ನೀಡಿದ ದಿನದ ಬಳಿಕ ಡೆಂಘಿ ರೋಗಕ್ಕೆ ತುತ್ತಾಗಿದ್ದರು. ಇವರೆಲ್ಲರನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.