ಕರ್ನಾಟಕ

karnataka

ETV Bharat / bharat

ಅಮ್ಮಾ ಟಾಟಾ...ಕೆಲವೇ ಕ್ಷಣಗಳಲ್ಲಿ ತಾಯಿಯಿಂದ ಹೆತ್ತ ಮಗ ಶಾಶ್ವತ ದೂರ! - ಹೈದರಾಬಾದ್​ ಅಪಘಾತ ಸುದ್ದಿ

ಆ ಮಗು ತನ್ನ ತಾಯಿಗೆ ಟಾಟಾ ಹೇಳಿ ಕೆಲವೇ ಕ್ಷಣದಲ್ಲಿ ತನ್ನ ಮಾವನೊಂದಿಗೆ ಇಹಲೋಕ ತ್ಯೆಜಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಅಮ್ಮಾ ಟಾಟಾ

By

Published : Aug 6, 2019, 2:35 PM IST

Updated : Aug 6, 2019, 3:14 PM IST

ಹೈದರಾಬಾದ್​: ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆ ದಂಪತಿಗೆ ಇಬ್ಬರು ಮಕ್ಕಳು. ಶಾಲೆಗೆ ತೆರಳಲು ತಾಯಿಗೆ ಟಾಟಾ ಹೇಳಿ ಕೆಲವೇ ಕ್ಷಣಗಳಲ್ಲಿ ಆ ಮಗು ಮತ್ತು ಆತನ ಮಾವ ಶಾಶ್ವತವಾಗಿಯೇ ದೂರವಾಗಿದ್ದಾರೆ.

ಶ್ರೇಯಸ್​ ಮತ್ತು ಬಾಲಕೃಷ್ಣ ಚಿತ್ರ

ಇಲ್ಲಿನ ಬಾಲಾಪೂರ್​ ನಗರದಲ್ಲಿ ವನಪರ್ತಿ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ಸುರೇಂದ್ರ, ರೇಣುಕಾ ದಂಪತಿ ವಾಸಿಸುತ್ತಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರಿಗೆ ಶ್ರೇಯಸ್​ (8) ಮತ್ತು ಲೋಕ್ಷಿತ್​ (6) ಇಬ್ಬರು ಮಕ್ಕಳು. ಈ ಮಕ್ಕಳು ದಿಲ್​ಸುಖ್​ನಗರ್​ ಪಬ್ಲಿಕ್​ ಸ್ಕೂಲ್​ನಲ್ಲಿ 3 ಮತ್ತು 1 ತರಗತಿ ವ್ಯಾಸಂಗ​ ಮಾಡುತ್ತಿದ್ದರು.

ಸಂಬಂಧದಲ್ಲಿ ಮಾವ ಆಗಿರುವ ಬಾಲಕೃಷ್ಣ ಅಥವಾ ತಂದೆ ಸುರೇಂದ್ರ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದರು. ಸೋಮವಾರ ಬೆಳಗ್ಗೆ ಶಾಲೆಗೆಂದು ಮಕ್ಕಳನ್ನು ತಾಯಿ ರೇಣುಕಾ ರೆಡಿ ಮಾಡಿದ್ದರು. ತನ್ನ ದೊಡ್ಡ ಮಗ ಶ್ರೇಯಸ್​ ಮತ್ತು ಲೋಕ್ಷಿತ್​ ತಾಯಿಗೆ ಟಾಟಾ ಮಾಡಿ ಮಾವ ಬಾಲಕೃಷ್ಣ ಬೈಕ್​ ಹತ್ತಿ ಶಾಲೆಗೆ ತೆರಳಿದ್ದಾರೆ.

ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಯಮನಂತೆ ಎದುರಿನಿಂದ ಬಂದೆರಗಿದ ಶಾಲೆಯ ಬಸ್ಸು ಇವರ ಬೈಕ್‌ಗೆ​ ಡಿಕ್ಕಿ ಹೊಡೆದಿದೆ. ಬಾಲಕೃಷ್ಣ ತಲೆ ಮತ್ತು ಶ್ರೇಯಸ್​ ಮೈ ಮೇಲೆ ಬಸ್​ ಹರಿದಿದ್ದು, ಚಾಲಕ ಬಸ್​ ನಿಲ್ಲಿಸದೇ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಶ್ರೇಯಸ್​ ಮತ್ತು ಬಾಲಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಲೋಕ್ಷಿತ್​ ರಸ್ತೆ ಪಕ್ಕಕ್ಕೆ ಬಿದ್ದಿದ್ದು, ಗಾಯಗೊಂಡಿದ್ದಾನೆ. ಕೂಡಲೇ ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಯಿ ರೇಣುಕಾಗೆ ಅಪಘಾತದಲ್ಲಿ ಶ್ರೇಯಸ್​ ಮೃತಪಟ್ಟಿರುವ ಸುದ್ದಿ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಮೃತ ಮಗನನ್ನು ಮಡಿಲಲ್ಲಿ ಹಾಕಿಕೊಂಡು ರೋದಿಸುತ್ತಿರುವ ಸನ್ನಿವೇಶ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿತ್ತು.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Aug 6, 2019, 3:14 PM IST

ABOUT THE AUTHOR

...view details