ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುವುದರಿಂದ ಸಹಜವಾಗಿಯೇ ಈ ಅವಧಿಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳೂ ಹೆಚ್ಚಾಗುತ್ತವೆ. ಮಳೆಗಾಲದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಚಿಕೂನ್ಗುನ್ಯಾ ರೋಗ ಲಕ್ಷಣಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತಿ ಮುಖ್ಯವಾಗಿದೆ. ಭಾರತದಲ್ಲಿ ಚಿಕೂನ್ಗುನ್ಯಾ ಹರಡುವಿಕೆಯ ಪ್ರಮಾಣ, ರೋಗ ಲಕ್ಷಣಗಳು ಹಾಗೂ ಪರಿಹಾರೋಪಾಯಗಳನ್ನು ಇಲ್ಲಿ ತಿಳಿಸಲಾಗಿದೆ.
ಚಿಕೂನ್ಗುನ್ಯಾ ಹರಡುವ ಏಡಿಸ್ ಅಲ್ಬೊಪಿಕ್ಟಸ್ ಸೊಳ್ಳೆ
ಏಡಿಸ್ ಅಲ್ಬೊಪಿಕ್ಟಸ್ ಎಂಬ ಜಾತಿಯ ಸೊಳ್ಳೆಯಿಂದ ಹರಡುವ ಚಿಕೂನ್ಗುನ್ಯಾ ರೋಗವು ಮಾರಣಾಂತಿಕವಲ್ಲದ ಸಾಂಕ್ರಾಮಿಕ ಕಾಯಿಲೆಯಾಗಿದೆ. ನಿಂತ ನೀರಿನಲ್ಲಿ ಬೆಳೆಯುವ ಈ ಸೊಳ್ಳೆಗಳು ಮನುಷ್ಯರನ್ನು ರಾತ್ರಿ ಮಾತ್ರವಲ್ಲದೇ ಹಗಲಿನಲ್ಲಿಯೂ ಕಚ್ಚುತ್ತವೆ. ಚಿಕೂನ್ಗುನ್ಯಾ ಪದದ ಅರ್ಥವು ಬಾಗಿಸುವುದು ಅಥವಾ ಮಣಿಸುವುದು ಎಂದಾಗಿದೆ. ಈ ರೋಗ ಬಂದಾಗ ಮೈಯಲ್ಲಿ ಸಂಧಿವಾತ ರೂಪದ ತೀವ್ರ ಸ್ನಾಯು ಹಾಗೂ ಕೀಲು ನೋವು ಉಂಟಾಗುವುದರಿಂದ ಚಿಕೂನ್ಗುನ್ಯಾ ಎಂಬ ಹೆಸರು ಬಂದಿದೆ.
ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಚಿಕೂನ್ಗುನ್ಯಾ !
2005 ರಿಂದ 2018 ರ ಅವಧಿಯಲ್ಲಿ ಭೌಗೋಳಿಕವಾಗಿ ಚಿಕೂನ್ಗುನ್ಯಾ ಹರಡುವಿಕೆ ಹಾಗೂ ಬೆಳವಣಿಗೆಯ ಕುರಿತಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ತಂಡ ಇತ್ತೀಚೆಗೆ ಅಧ್ಯಯನ ನಡೆಸಿದೆ. ಭಾರತದಲ್ಲಿ ಚಿಕೂನ್ಗುನ್ಯಾ ವ್ಯಾಪಕವಾಗಿ ಹರಡಿದ್ದು, ವಿಶ್ವದ ಇತರ ರಾಷ್ಟ್ರಗಳಿಗೂ ವ್ಯಾಪಿಸುತ್ತಿದೆ. ಅದರಲ್ಲೂ ನೆರೆಯ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಚೀನಾಗಳಲ್ಲೂ ಚಿಕೂನ್ಗುನ್ಯಾ ಹರಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2015 ರಿಂದ ಭಾರತದ ರಾಜ್ಯಗಳಲ್ಲಿ ಚಿಕೂನ್ಗುನ್ಯಾ ಜ್ವರದ ಪ್ರಕರಣಗಳ ಅಂಕಿ ಸಂಖ್ಯೆಗಳು
Sl. No. | States/UTs | 2015 | 2016 | 2017 | 2018 | 2019 | |||||
No. Susp. Chikungunya cases | No. of conf. cases | No. Susp. Chikungunya cases | No. of conf. cases | No. Susp. Chikungunya cases | No. of conf. cases | No. Susp. Chikungunya cases | No. of conf. cases | No. of conf. cases | No. of conf. cases | ||
1 | ಆಂಧ್ರ ಪ್ರದೇಶ | 817 | 83 | 960 | 147 | 1162 | 108 | 622 | 79 | 700 | 67 |
2 | ಅರುಣಾಚಲ ಪ್ರದೇಶ | 35 | 6 | 239 | 8 | 133 | 0 | 507 | 1 | 332 | 55 |
3 | ಅಸ್ಸಾಂ | 0 | 0 | 40 | 40 | 41 | 41 | 3 | 3 | 0 | 0 |
4 | ಬಿಹಾರ | 3 | 1 | 566 | 566 | 1251 | 1251 | 156 | 156 | 532 | 532 |
5 | ಗೋವಾ | 561 | 32 | 337 | 49 | 509 | 48 | 455 | 77 | 796 | 319 |
6 | ಗುಜರಾತ | 406 | 42 | 3285 | 847 | 7953 | 1363 | 10601 | 1290 | 6491 | 496 |
7 | ಹರಿಯಾಣ | 1 | 1 | 5394 | 1970 | 220 | 6 | 62 | 3 | 0 | 0 |
8 | ಜಮ್ಮು ಕಾಶ್ಮೀರ | 0 | 0 | 1 | 1 | 0 | 0 | 1 | 1 | 0 | 0 |
9 | ಜಾರ್ಖಂಡ್ | 21 | 0 | 47 | 14 | 269 | 17 | 3405 | 851 | 1679 | 166 |
10 | ಕರ್ನಾಟಕ | 20763 | 2099 | 15666 | 1528 | 32831 | 3511 | 20411 | 2546 | 35366 | 2970 |
11 | ಕೇರಳ | 175 | 152 | 129 | 129 | 78 | 74 | 77 | 77 | 52 | 52 |
12 | ಮಧ್ಯ ಪ್ರದೇಶ | 67 | 11 | 2280 | 862 | 2477 | 858 | 3211 | 1609 | 2248 | 620 |
13 | ಮೇಘಾಲಯ | 78 | 15 | 360 | 68 | 236 | 45 | 44 | 2 | 9 | 1 |
14 | ಮಿಜೋರಾಂ | 0 | 0 | 0 | 0 | 0 | 0 | 93 | 10 | 0 | 0 |
15 | ಮಹಾರಾಷ್ಟ್ರ | 391 | 207 | 7570 | 2949 | 8110 | 1438 | 9884 | 1009 | 4382 | 1378 |
16 | ಮಣಿಪುರ | 0 | 0 | 0 | 0 | 0 | 0 | 2 | 0 | 40 | 3 |
17 | ಒಡಿಶಾ | 81 | 46 | 51 | 15 | 0 | 0 | 0 | 0 | 0 | 0 |
18 | ಪಂಜಾಬ್ | 180 | 18 | 4407 | 2054 | 3251 | 201 | 736 | 25 | 243 | 2 |
19 | ರಾಜಸ್ಥಾನ್ | 7 | 7 | 2506 | 2215 | 1612 | 1612 | 254 | 254 | 169 | 169 |
20 | ಸಿಕ್ಕಿಂ | 0 | 0 | 30 | 5 | 130 | 8 | 384 | 28 | 641 | 62 |
21 | ತಮಿಳು ನಾಡು | 329 | 329 | 86 | 86 | 131 | 131 | \284 | 284 | 345 | 345 |
22 | ತೆಲಂಗಾಣ | 2067 | 149 | 611 | 71 | 1277 | 58 | 1954 | 489 | 4816 | 1078 |
23 | ತ್ರಿಪುರಾ | 180 | 7 | 311 | 70 | 574 | 64 | 683 | 75 | 953 | 106 |
24 | ಉತ್ತರ ಪ್ರದೇಶ | 0 | 0 | 2458 | 2458 | 103 | 103 | 58 | 58 | 5 | 5 |
25 | ಉತ್ತರಾಖಂಡ್ | 0 | 0 | 35 | 10 | 0 | 0 | 29 | 7 | 1 | 1 |
26 | ಪಶ್ಚಿಮ ಬಂಗಾಳ | 1013 | 61 | 1071 | 117 | 2103 | 577 | 52 | 23 | - | - |
27 | ಅಂಡಮಾನ್ ನಿಕೋಬಾರ್ | 68 | 3 | 18 | 0 | 93 | 17 | 205 | 27 | 702 | 53 |
28 | ಚಂಡೀಗಢ | 1 | 1 | 2857 | 272 | 1810 | 54 | 357 | 4 | 82 | 0 |
29 | ದಾದ್ರಾ ನಗರ್ ಹವೇಲಿ | 0 | 0 | 0 | 0 | 0 | 0 | 0 | 0 | 0 | 0 |
30 | ದೆಹಲಿ | 64 | 64 | 12279 | 9793 | 940 | 940 | 407 | 407 | 442 | 442 |
31 | ಲಕ್ಷದ್ವೀಪ | 0 | 0 | 0 | 0 | 0 | 0 | - | - | - | - |
32 | ಪುದುಚೇರಿ | 245 | 8 | 463 | 20 | 475 | 23 | 2876 | 361 | 4191 | 555 |
ಒಟ್ಟು | 27553 | 3342 | 64057 | 26364 | 67769 | 12548 | 57813 | 9756 | 65217 | 9477 |
ಚಿಕೂನ್ಗುನ್ಯಾ ಜ್ವರದ ಲಕ್ಷಣಗಳು
ಚಿಕೂನ್ಗುನ್ಯಾ ವೈರಸ್ ಸೋಂಕು ತಗುಲಿದ ವ್ಯಕ್ತಿಗೆ ಕೆಲ ದಿನಗಳವರೆಗೆ ನಿರಂತರವಾಗಿ ಜ್ವರ ಬರಬಹುದು ಹಾಗೂ ಮುಂದಿನ ಕೆಲ ವಾರ ಅಥವಾ ತಿಂಗಳುಗಳವರೆಗೆ ಸ್ನಾಯು, ಕೀಲು ನೋವು ಬಾಧಿಸಬಹುದು. ಡೆಂಗ್ಯೂ ಜ್ವರದ ರೀತಿಯಲ್ಲೇ ಚಿಕೂನ್ಗುನ್ಯಾ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವೈರಸ್ ಹರಡುವ ಸೊಳ್ಳೆ ಕಚ್ಚಿದ ಕೆಲ ದಿನಗಳಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:
* ಜ್ವರ (ಕೆಲ ಬಾರಿ 104 ಡಿಗ್ರಿಯಷ್ಟು ಹೆಚ್ಚಾಗಬಹುದು)
* ಕೀಲು ನೋವು
* ತಲೆನೋವು
* ಸ್ನಾಯುಗಳಲ್ಲಿ ಸೆಳೆತ
* ಕೀಲುಗಳ ಸುತ್ತ ಬಾವು ಬರುವುದು
ಕೆಲ ವಿರಳ ಪ್ರಕರಣಗಳಲ್ಲಿ ಮೈಮೇಲೆ ದದ್ದುಗಳಾಗುವುದು, ಕಂಜಕ್ಟಿವಿಟೀಸ್ (ಕಣ್ಣು ಬೇನೆ), ವಾಂತಿ ಮುಂತಾದ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ.