ಕರ್ನಾಟಕ

karnataka

12ನೇ ಕ್ಲಾಸ್​ ಪಾಸ್​ ಮಾಡಿದ್ರೆ 25, ಡಿಗ್ರಿ ಮಾಡೋ ಹೆಣ್ಮಕ್ಕಳಿಗೆ 50 ಸಾವಿರ ರೂ: ಬಿಹಾರ ಸಿಎಂ ಘೋಷಣೆ

By

Published : Sep 25, 2020, 8:38 PM IST

ಬಿಹಾರದಲ್ಲಿ ದ್ವಿತಿಯ ಪಿಯು ಹಾಗೂ ಪದವಿ ಶಿಕ್ಷಣ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಬಂಪರ್​​ ಯೋಜನೆ ಘೋಷಣೆ ಮಾಡಿದೆ.

Chief Minister Nitish Kumar
Chief Minister Nitish Kumar

ಪಾಟ್ನಾ(ಬಿಹಾರ):ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್​ 28, ನವೆಂಬರ್​ 3 ಹಾಗೂ ನವೆಂಬರ್​​​ 7ರಂದು ಎಲೆಕ್ಷನ್​ ನಡೆಯಲಿದೆ. ಫಲಿತಾಂಶ ನವೆಂಬರ್​ 10ರಂದು ಬಹಿರಂಗಗೊಳ್ಳಲಿದೆ. ಇದರ ಮಧ್ಯೆ ಅಲ್ಲಿನ ವಿದ್ಯಾರ್ಥಿಗಳಿಗೆ ಬಿಹಾರ ಸಿಎಂ ಭರ್ಜರಿ ಗಿಫ್ಟ್​​ ನೀಡಿದ್ದಾರೆ.

12ನೇ ತರಗತಿ ಪಾಸ್​ ಮಾಡುವ ವಿದ್ಯಾರ್ಥಿನಿಯರಿಗೆ 25 ಸಾವಿರ ರೂ, ಹಾಗೂ ಡಿಗ್ರಿ ಕಲಿಯುವ ವಿದ್ಯಾರ್ಥಿನಿಯರಿಗೆ 50 ಸಾವಿರ ರೂ. ನೀಡುವುದಾಗಿ ಸಿಎಂ ನಿತೀಶ್​​ ಕುಮಾರ್​ ಘೋಷಣೆ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದರು.

ಕೇಂದ್ರ ಚುನಾವಣಾ ಆಯೋಗದಿಂದ ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದು ಸ್ವಾಗತಾರ್ಹ ಎಂದಿರುವ ಸಿಎಂ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಹೊಸ ಇಲಾಖೆ ರಚಿಸುತ್ತೇವೆ ಎಂದು ತಿಳಿಸಿದ್ದು, ಐಟಿಐ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳು ಇದರ ಅಡಿ ಬರುತ್ತವೆ ಎಂದಿದ್ದಾರೆ. ಇದೇ ವೇಳೆ, ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತೇವೆ ಎಂದಿದ್ದಾರೆ.

ABOUT THE AUTHOR

...view details