ನವದೆಹಲಿ:ದೇಶದ ಪ್ರಮುಖ ನಗರಗಳಲ್ಲಿ ನಾಳೆಯಿಂದ ಕೆಲವೊಂದು ಷರತ್ತುಗಳೊಂದಿಗೆ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದ್ದು, ಅದಕ್ಕಾಗಿ ಇಂದು ಸಂಜೆ 4 ಗಂಟೆಯಿಂದ ಆನ್ಲೈನ್ ಬುಕ್ಕಿಂಗ್ ಕೂಡ ಆರಂಭಗೊಳ್ಳಲಿದೆ. ಕೇಂದ್ರದ ಈ ನಿರ್ಧಾರಕ್ಕೆ ಚಿದಂಬರಂ ಶಹಬ್ಬಾಸ್ಗಿರಿ ನೀಡಿದ್ದಾರೆ.
ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಡೆ ಸ್ವಾಗತಿಸಿರುವ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಚಿದಂಬರಂ, ಕೇಂದ್ರ ಸರ್ಕಾರ ದೇಶದಲ್ಲಿ ಅಂತರ್ - ರಾಜ್ಯ ರೈಲು ಆರಂಭಿಸಿರುವ ನಿರ್ಧಾರ ಉತ್ತಮ ನಡೆಯಾಗಿದ್ದು, ಅದೇ ರೀತಿಯಲ್ಲಿ ಬಸ್ ಸೇವೆ ಕೂಡ ಆರಂಭ ಮಾಡಬೇಕು ಎಂದಿದ್ದಾರೆ.