ನವದೆಹಲಿ:ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಪರಿಹಾರ ಕ್ರಮಗಳ ಮೂರನೇ ಕಂತಿನ ವಿವರಗಳನ್ನು ನಿನ್ನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಈ ಸಂಬಂಧ ಕೇಂದ್ರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ವಿತ್ತ ಸಚಿವರು ನಿನ್ನೆ ಘೋಷಿಸಿದ ಮೊತ್ತ ಅಂದರೆ 500 ಕೋಟಿ ರೂ. ಮತ್ತು 13,343 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಸೇರಿಸಲಾಗಿದೆಯೇ ಅಥವಾ ಕೇಂದ್ರ ಘೋಷಿಸಿರುವ ಹೆಚ್ಚುವರಿ ಮೊತ್ತದಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ದಯವಿಟ್ಟು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.