ನವದೆಹಲಿ :ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ತಮ್ಮದೇ ಶೈಲಿಯಲ್ಲಿ ವಾಗ್ದಾಳಿ ಮುಂದುವರಿಸಿದ್ದಾರೆ. ಅಲ್ಪ ಜ್ಞಾನ ಭಾರಿ ಅಪಾಯಕಾರಿ ಎಂದಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ರದ್ದು ಮಾಡುವುದು ಕಾಂಗ್ರೆಸ್‌ನ 2019ರ ಪ್ರಾಣಾಳಿಕೆಯಾಗಿತ್ತು. ಅಲ್ಪಜ್ಞಾನ ಭಾರಿ ಅಪಾಯಕಾರಿ, ಅಲ್ಪಓದು ಇನ್ನೂ ಅಪಾಯಕಾರಿ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೋಧಿ, ಅಕ್ಕಿ ಸೇರಿದಂತೆ ರೈತರ ಕೃಷಿ ಉತ್ಪನ್ನಗಳಿಗಾಗಿ ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ವ್ಯವಸ್ಥೆ ಜಾರಿ ಮಾಡಿತ್ತು. ಇದಕ್ಕಾಗಿ ರಾಷ್ಟ್ರೀಯ ಆಹಾರ ಭದ್ರತೆ 2013 ಕಾಯ್ದೆಯನ್ನು ಜಾರಿಗೆ ತಂದಿತ್ತು ಎಂದು ಹೇಳಿದ್ದಾರೆ.
2019ರ ಕಾಂಗ್ರೆಸ್ ಪ್ರಣಾಳಿಯಲ್ಲಿನ ಭರವಸೆಗಳ ಬಗ್ಗೆ ಮಾಹಿತಿ ನೀಡಿರುವ ಚಿದಂಬರಂ, ರೈತರ ಕೃಷಿ ಉತ್ಪನ್ನ ಅಥವಾ ಸಂಸ್ಥೆಗಳ ಪ್ರೋತ್ಸಾಹ, ತಂತ್ರಜ್ಞಾನ ಮತ್ತು ಮಾರುಕಟ್ಟೆ ವಿಸ್ತರಣೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಮಾತ್ರವಲ್ಲದೆ, ರೈತರು ತಮ್ಮ ಉತ್ಪನ್ನಗಳನ್ನು ದೊಡ್ಡಹಳ್ಳಿ, ಸಣ್ಣ ನಗರಗಳಲ್ಲಿ ಮಾರಾಟ ಮಾಡಲು, ಅದಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವ ಭರವಸೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಮಾರುಕಟ್ಟೆ ಸಂಬಂಧ ಅನ್ನದಾತರಿಗೆ ಬಹುತ್ವ ಆಯ್ಕೆಯ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಚಿದಂಬರಂ ಪ್ರತಿಪಾದಿಸಿದ್ದಾರೆ.