ಕಲ್ಕತ್ತಾ: ಇಲ್ಲಿನ ಪಾರ್ಕ್ ಸರ್ಕಸ್ ಮೈದಾನದಲ್ಲಿ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಧರಣಿ ನಡೆಸುತ್ತಿದ್ದ ಮಹಿಳಾ ಪ್ರತಿಭಟನಾಕಾರರನ್ನು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಭೇಟಿಯಾಗಿ ಬೆಂಬಲ ನೀಡಿದರು.
ಸಿಎಎ ವಿರುದ್ಧ ಕೋಲ್ಕತ್ತಾದಲ್ಲಿ ಮಹಿಳೆಯರ ಧರಣಿ: ಪ್ರತಿಭಟನಾಕರರ ಭೇಟಿ ಮಾಡಿದ ಚಿದಂಬರಂ - ಸಿಎಎ ವಿರುದ್ಧ ಕಲ್ಕತ್ತಾದಲ್ಲಿ ಮಹಿಳೆಯರ ಧರಣಿ
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನವರಿ 7 ರಿಂದ ಕೋಲ್ಕತ್ತಾದ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಭೇಟಿ ಮಾಡಿದರು.
ಮಾಜಿ ಸಚಿವ ಪಿ. ಚಿದಂಬರಂ
ನಿನ್ನೆ ರಾತ್ರಿ ಅವರು ಪಾರ್ಕ್ ಸರ್ಕಸ್ ಮೈದಾನದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದು, ಇವರಿಗೆ ಹಿರಿಯ ಕಾಂಗ್ರೆಸ್ ನಾಯಕ ಇಂದು ಸಿಎಎ ವಿಚಾರವಾಗಿ ಕೋಲ್ಕತ್ತಾದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಕೇಂದ್ರ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಭಾಗವಹಿಸಲಿದ್ದಾರೆ. ಈ ವೇಳೆ ಅಲ್ಲಿನ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಸಾಥ್ ನೀಡಿದರು.
ಈ ಮಹಿಳೆಯರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನವರಿ 7 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.