ಕರ್ನಾಟಕ

karnataka

ETV Bharat / bharat

ಈ ಗ್ರಾಮದಲ್ಲಿ ಚಿಕನ್​​ ,ಮೀನು ಸೇವಿಸಲ್ಲ... ಕೋಳಿ ಕೂಗಲ್ಲ, ಪ್ರಾಣಿ ಸಾಕಣೆ ನಿಷೇಧ! - ಹೈದರಾಬಾದ್​​

ಮಟನ್​, ಮೀನು ಹಾಗೂ ಮೊಟ್ಟೆ ಮಾಂಸ ಪ್ರಿಯರಿಗೆ ಇಷ್ಟವಾಗುವ ಆಹಾರ. ನಿತ್ಯ ಚಾಚು ತಪ್ಪದೇ ಇದರ ಸೇವನೆ ಮಾಡುವ ಅನೇಕರ ಜನರಿದ್ದಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಅನೇಕ ತಲೆಮಾರುಗಳಿಂದ ಇದಕ್ಕೆ ತಿಲಾಂಜಲಿ ಹಾಡಲಾಗಿದೆ.

ಚಿಕನ್​ ಸೇವನೆ ಮಾಡಲ್ಲ

By

Published : Sep 9, 2019, 6:56 PM IST

ಹೈದರಾಬಾದ್​​: ಚಿಕನ್​, ಮಾಂಸ ಪ್ರಿಯರಿಗೆ ಇಷ್ಟವಾದ ಆಹಾರಗಳಲ್ಲಿ ಒಂದು. ಮೊಟ್ಟೆ ಸಹ ಪ್ರೋಟೀನ್ ಅಂಶಗಳನ್ನೊಳಗೊಂಡ ಆಹಾರವಾಗಿದ್ದು, ಇದರ ಜತೆಗೆ ಮೀನು ಸಹ ಕೆಲವರಿಗೆ ಅಚ್ಚುಮೆಚ್ಚಿನ ಆಹಾರ. ಈ ಮಾಂಸಾಹಾರ ಇಂದಿನ ದಿನಮಾನಗಳಲ್ಲಿ ಜನರು ಹೆಚ್ಚಾಗಿ ಇಷ್ಟಪಟ್ಟು ಸೇವನೆ ಮಾಡುತ್ತಾರೆ.

ಆದರೆ ತೆಲಂಗಾಣದ ಕಂಚಿರಾವುಪಲ್ಲಿ ತಾಂಡಾ ಗ್ರಾಮದ ಜನರು ಈ ಮೂರು ಆಹಾರ ಸೇವನೆ ಮಾಡುವುದಿಲ್ಲ. ಅನೇಕ ತಲೆಮಾರುಗಳಿಂದ ಅವರು ಚಿಕನ್​,ಮೀನು ಸೇವನೆ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಜತೆಗೆ ಈ ಗ್ರಾಮದಲ್ಲಿ ಪ್ರಾಣಿಗಳನ್ನು ಸಕಾಣೆ ಮಾಡುವುದಿಲ್ಲ. ಪ್ರತಿ ಗ್ರಾಮದಲ್ಲಿ ಕೋಳಿ ಕೂಗುತ್ತಿದ್ದಂತೆ ಎಲ್ಲರೂ ಎದ್ದು ತಮ್ಮ ದಿನನಿತ್ಯದ ಕೆಲಸದಲ್ಲಿ ನಿರತರಾದರೆ, ಈ ಕುಗ್ರಾಮದಲ್ಲಿನ ಸಂಸ್ಕೃತಿ ವಿಚಿತ್ರವಾಗಿ ಕಂಡು ಬರುತ್ತದೆ.

ಚಿಕನ್​ ಸೇವನೆ ಮಾಡಲ್ಲ

ವನಪರ್ತಿ ಜಿಲ್ಲೆಯ ಪೆಬ್ಬೈರ್​ ಮಂಡಲದಲ್ಲಿರುವ ಕಂಚಿರಾವುಪಲ್ಲಿ 500 ಜನಸಂಖ್ಯೆ ಹೊಂದಿದ್ದು, ಇಲ್ಲಿನ ಜನರು ಮಾಂಸಾಹಾರದಿಂದ ದೂರ ಉಳಿಯಲು ಒಂದು ಕಥೆಯಿದೆ. ಗುರು ಸೋಮಸಾದ್ ಭೋಜಿ ಇಲ್ಲಿನ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಯಾರು ಮಾಂಸಾಹಾರ ಸೇವನೆ ಮಾಡುವುದಿಲ್ವಂತೆ. ಒಂದು ದಿನ ಕೋಳಿ ಉಗುಳನ್ನು ನುಂಗುವುದನ್ನ ನೋಡಿದ್ದರಂತೆ. ಅಂದಿನಿಂದ ಈ ಗ್ರಾಮದಲ್ಲಿ ಕೋಳಿ ಹಾಗೂ ಮೀನಿನ ಮಾಂಸ ಸೇವನೆ ಮಾಡುವುದನ್ನ ನಿಷೇಧಿಸಿದ್ದು, ಗ್ರಾಮದಲ್ಲಿ ಯಾರಾದರೂ ಅದರ ಸೇವನೆ ಮಾಡಿದರೆ ಅವರು ಶಾಪಗ್ರಸ್ಥರಾಗುತ್ತಾರೆಂಬುದು ಇಲ್ಲಿನ ಪ್ರತೀತಿಯಾಗಿದೆ.

ಹಬ್ಬ-ಹರಿದಿನಗಳಲ್ಲಿ ಈ ಗ್ರಾಮದ ಜನರು ಕುರಿಮರಿ ಹಾಗೂ ಮಟನ್​ ಸೇವನೆ ಮಾಡ್ತಾರೆ. ಇನ್ನು ಇಲ್ಲಿನ ಜನರು ಬೇರೆ ಗ್ರಾಮಕ್ಕೆ ಅಥವಾ ತಮ್ಮ ಸಂಬಂಧಿಕರ ಮನೆಗೆ ತೆರಳಿದಾಗ ಸಹ ಮಟನ್​ ಮಾತ್ರ ಸೇವನೆ ಮಾಡುತ್ತಾರೆ.

ವಿಚಿತ್ರ ಸಂಪ್ರದಾಯ
ಕಾಂಚಿರಾವುಪಲ್ಲಿ ಗ್ರಾಮದಲ್ಲಿನ ಯುವತಿಯರು ಮ್ಯಾರೇಜ್​ ಆಗಿ ಬೇರೆ ಊರಿಗೆ ತೆಳಿದರೆ ಅವರು ತಮಗೆ ಇಷ್ಟವಾದ ರೀತಿಯಲ್ಲಿ ಚಿಕನ್​ ಸೇವನೆ ಮಾಡಬಹುದು. ಆದರೆ ಈ ಗ್ರಾಮಕ್ಕೆ ಮದುವೆಯಾಗಿ ಬರುವ ಹೆಣ್ಣು ಮಕ್ಕಳು ಒಂದು ತಿಂಗಳ ಮುಂಚಿತವಾಗಿ ಮಾಂಸಹಾರ ತಿನ್ನುವುದನ್ನ ಬಿಡಬೇಕು. ಬೇರೆ ಸ್ಥಳಗಳಿಂದ ಇಲ್ಲಿಗೆ ಬರುವವರು ಸಹ ಈ ಗ್ರಾಮದ ಪದ್ಧತಿ ಅನುಕರಣೆ ಮಾಡುತ್ತಾರೆ.

ABOUT THE AUTHOR

...view details