ರಾಯಗಢ(ಛತ್ತೀಸ್ಗಢ): ಇಲ್ಲಿನ ಪೊಲೀಸರು ರಕ್ಷಾ ಬಂಧನದ ನಿಮಿತ್ತ 14 ಲಕ್ಷಕ್ಕೂ ಹೆಚ್ಚು ಫೇಸ್ ಮಾಸ್ಕ್‌ಗಳನ್ನು ಜನರಿಗೆ ವಿತರಿಸಲಿದ್ದಾರೆ.
ಪೊಲೀಸರಿಂದ ರಾಖಿ ಬದಲಿಗೆ 14 ಲಕ್ಷ ಮಂದಿಗೆ ಮಾಸ್ಕ್ ಹಂಚಿಕೆ - ರಾಖಿ ಬದಲಿಗೆ ಫೇಸ್ ಮಾಸ್ಕ್
ರಾಯಗಢ ಪೊಲೀಸರು ಸ್ವಯಂಸೇವಕರ ಬೆಂಬಲದೊಂದಿಗೆ ಮುಖಗವಸುಗಳನ್ನ ಸಾರ್ವಜನಿಕರಿಗೆ ರಾಖಿ ಹಬ್ಬದ ನಿಮಿತ್ತ ನೀಡಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ ಹರಡುವಿಕೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಇದೇ ವೇಳೆ, ಇಲಾಖೆ ಸಾರ್ವಜನಿಕರು ವ್ಯಕ್ತಿಗತ ಅಂತರವನ್ನ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ರಾಯಗಢ ಪೊಲೀಸರು ಸ್ವಯಂಸೇವಕರ ಬೆಂಬಲದೊಂದಿಗೆ ಮುಖಗವಸುಗಳನ್ನ ಸಾರ್ವಜನಿಕರಿಗೆ ರಾಖಿ ಹಬ್ಬದ ನಿಮಿತ್ತ ನೀಡಲಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಣೆಯ ಬಂಧ ಎಂದೇ ಆಚರಿಸಲ್ಪಡುವ ರಕ್ಷಾ ಬಂಧನ್ ಹಿನ್ನೆಲೆಯಲ್ಲಿ ಕೊರೊನಾ ತಡೆಗಟ್ಟಲು, ರಾಖಿ ಬದಲಿಗೆ ಫೇಸ್ ಮಾಸ್ಕ್ಗಳನ್ನ ನೀಡಿ ಜನರಲ್ಲಿ ಕೊರೊನಾ ಅರಿವು ಮೂಡಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.